Webdunia - Bharat's app for daily news and videos

Install App

ಬಹಿರ್ದೆಸೆಗೆ ಹೋಗಿದ್ದ ವೇಳೆ ಫೋಟೋ ತೆಗೆದ ದುರುಳ: ನೊಂದ ಯುವತಿ ಆತ್ಮಹತ್ಯೆ ಯತ್ನ

Webdunia
ಶುಕ್ರವಾರ, 31 ಜುಲೈ 2015 (11:18 IST)
ಬಹಿರ್ದೆಸೆಗೆ ಹೋಗಿದ್ದ ವೇಳೆ ಯುವಕನೊಬ್ಬ ಫೋಟೋ ಕ್ಲಿಕ್ಕಿಸಿದ್ದಕ್ಕೆ ಮನನೊಂದ ಯುವತಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಬರೇಲಿಯಲ್ಲಿ ನಡೆದಿದೆ.
 
ಆಕೆಯ ತಂದೆ ಬಳಿ  ಪರವಾನಿಗೆ ಪಡೆದು ಕೊಂಡಿದ್ದ ಗನ್‌ನಿಂದ ಬಾಲಕಿ ಗುಂಡಿಟ್ಟು ಕೊಂಡಿದ್ದಾಳೆ. ತೀವ್ರ ಚಿಂತಾಜನಕ ಸ್ಥಿತಿಯಲ್ಲಿರುವ ಆಕೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. 
 
ಎರಡು ತಿಂಗಳ ಹಿಂದೆ ಯುವತಿ ಬಯಲಿನಲ್ಲಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಅದೇ ಗ್ರಾಮದ ಯುವಕ ಮುಲ್‌ಚಂದ್ ಫೋಟೋ ತೆಗೆದಿದ್ದ. ಆ ಫೋಟೋವನ್ನು ಬುಧವಾರ ಗ್ರಾಮದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಇತರರಿಗೆ ತೋರಿಸಿದ್ದ. ಈ ಸುದ್ದಿ ಊರಿನಲ್ಲೆಲ್ಲ ಹರಿದಾಡಿ ವ್ಯಾಪಕ ಚರ್ಚೆಯಾಗ ತೊಡಗಿತು. ಕೆಲವು ಜನರು ಯುವತಿಯ ಕುಟುಂಬದವರನ್ನು ಕಂಡಾಗ ಕೊಂಕು ಮಾತಾಡಲು ಸಹ ಪ್ರಾರಂಭಿಸಿದ್ದಾರೆ. 
 
ತನಗೆ ಮತ್ತು ಪೋಷಕರಿಗಾದ ಅವಮಾನದಿಂದ ಜರ್ಜರಿತಳಾಗಿದ್ದ ಯುವತಿ ಗುಂಡು ಹಾರಿಸಿಕೊಂಡು ಸಾಯಸು ಪ್ರಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು  ಫರಿದ್ಪುರದ ಸಿಎಚ್‌ಸಿ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments