Webdunia - Bharat's app for daily news and videos

Install App

ಅಮಾನುಷ: ಬೆಚ್ಚಿ ಬೀಳಿಸುವ ಕೃತ್ಯವೆಸಗಿದ ಬಾಲಕರು

Webdunia
ಮಂಗಳವಾರ, 30 ಜೂನ್ 2015 (11:28 IST)
ಬದೌನ್‌ ಅತ್ಯಾಚಾರದ ಕರಿ ನೆರಳಿನಿಂದ ಎದ್ದೇಳುವ ಲಕ್ಷಣ ಕಾಣುತ್ತಿಲ್ಲ. ಕಳೆದ ಕೆಲ ತಿಂಗಳುಗಳ ಹಿಂದೆ ಇಬ್ಬರು ಸಹೋದರಿಯರು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದ ಬಳಿಕ ಬದೌನ್ ಅತ್ಯಾಚಾರದ ಕಾರಣಕ್ಕೆ ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ. ಪದೇ ಪದೇ ಅಲ್ಲಿ ಅತ್ಯಾಚಾರದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಈಗ ಮತ್ತೊಂದು ಕರಾಳ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಪೀಡಿತೆ ಮತ್ತು ಆರೋಪಿಗಳು ಅಪ್ರಾಪ್ತರಾಗಿದ್ದಾರೆ ಎಂಬುದು ಮತ್ತೂ ಶೋಚನೀಯ ವಿಷಯ.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಮೂವರು ಬಾಲಕರು ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದಲ್ಲದೇ  ಗುಪ್ತಾಂಗದಲ್ಲಿ ಮ್ಯಾಚ್‌‌ಸ್ಟಿಕ್‌‌,ಬಟ್ಟೆ, ಪ್ಲಾಸ್ಟಿಕ್ ಮತ್ತು ಮರದ ತುಂಡನ್ನು ಸೇರಿಸಿ ಪೈಶಾಚಿಕವಾಗಿ ನಡೆದುಕೊಳ್ಳುವುದರ ಮೂಲಕ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದಾರೆ. 
 
ಜೂನ್‌‌‌ 23ರಂದು ಈ ಘಟನೆ ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ. ಅಂದು ಬೆಳಿಗ್ಗೆ ಬಿಸ್ಕಿಟ್ ಮತ್ತು ಸಿಹಿ ತಿಂಡಿಯನ್ನು ತರಲು ಅಂಗಡಿಗೆ ಹೋಗಿದ್ದ 8ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಕರೆದ ನೆರೆಮನೆ ಬಾಲಕ ನಿನ್ನನ್ನು ಯಾರೋ ಅಪರಿಚಿತರು ಕಾಯುತ್ತಿದ್ದಾರೆ ಎಂದು ಹೇಳಿದ್ದಾನೆ. ಹೀಗಾಗಿ ಆಕೆಯ ಜತೆಗೆ ಹೋದ ಬಾಲಕಿಯ ಬಾಯಿ ಮತ್ತು ಕೈ ಕಟ್ಟಿ ಅಪಹರಿಸಿದ ಮೂವರು ಬಾಲಕರು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬಲವಂತವಾಗಿ ಮಾದಕ ಪಾನೀಯವನ್ನು ಕುಡಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. 
 
ಅತ್ಯಾಚಾರ ಎಸಗಿದ್ದಲ್ಲದೇ ಮನಬಂದಂತೆ ಆಕೆಯನ್ನು ಥಳಿಸಿದ ಯುವಕರು, ಗುಪ್ತಾಂಗದಲ್ಲಿ ಮ್ಯಾಚ್‌‌ಸ್ಟಿಕ್‌‌,ಬಟ್ಟೆ, ಪ್ಲಾಸ್ಟಿಕ್ ಮತ್ತು ಮರದ ತುಂಡನ್ನು ತೂರಿಸಿ ರಾಕ್ಷಸಿತನವನ್ನು ಪ್ರದರ್ಶಿಸಿದ್ದಾರೆ. ಘಟನೆಯ ಕುರಿತು ಯಾರಿಗಾದರೂ ಮಾಹಿತಿ ನೀಡಿದರೆ ನಿನ್ನನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. ನಂತರ ಆಕೆಯ ಮನೆಯ ಮುಂದೆ ಎಸೆದು ಹೋಗಿದ್ದಾರೆ.
 
ಆಕೆ ಈ ವಿಷಯವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಆಕೆ ಖಿನ್ನಳಾಗಿರುವುದನ್ನು ನೋಡಿದ ಚಿಕ್ಕಮ್ಮನ ಮಗಳು  ಏನಾಯಿತೆಂದು ವಿಚಾರಿಸಿದಾಗ ಬಾಲಕಿ ಎಲ್ಲ ವಿಷಯವನ್ನು ಹೇಳಿದ್ದಾಳೆ. 
 
ಈಗಾಗಲೇ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗಾಗಿ ಬಲೆ ಬೀಸಲಾಗಿದೆ ಎಂದು ಎಸ್‌‌ಪಿ ಅನಿಲ್‌‌‌ ಯಾದವ್‌‌ ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ