Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಲು ನಟನೆಯನ್ನು ತ್ಯಜಿಸಿದೆ: ಸ್ಮೃತಿ ಇರಾನಿ

ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಲು ನಟನೆಯನ್ನು ತ್ಯಜಿಸಿದೆ: ಸ್ಮೃತಿ ಇರಾನಿ
ನವದೆಹಲಿ , ಸೋಮವಾರ, 24 ನವೆಂಬರ್ 2014 (13:08 IST)
ಕಿರುತೆರೆಯಲ್ಲಿ ನಟಿಯಾಗಿ ಜನಪ್ರಿಯತೆಯ ಶಿಖರಕ್ಕೆ ಏರಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆಯಾಗಿ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ನಟನೆಗೆ ವಿದಾಯ ಹೇಳಿರುವುದಾಗಿ ಹೇಳಿದ್ದಾರೆ.

ನಾನು ರಾಜಕೀಯಕ್ಕೆ ಬಂದು ಸಂಸದೆ ಎನಿಸಿಕೊಂಡ ತರುವಾಯ ನಟನೆಯ ವೃತ್ತಿಯನ್ನು ತ್ಯಜಿಸಿದೆ. ರಾಜಕೀಯಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಬಯಸಿದರೆ ನೀವದಕ್ಕೆ,ಹೆಚ್ಚಿನ ಸಮಯ ನೀಡಬೇಕಾಗುತ್ತದೆ ಎಂದು ಸಚಿವೆ ಅಭಿಪ್ರಾಯ ಪಟ್ಟಿದ್ದಾರೆ.
 
38 ವರ್ಷದ ನಟಿ ಪರಿವರ್ತಿತ ರಾಜಕಾರಣಿ 2000ನೇ ದಶಕದಲ್ಲಿ ಏಕ್ತಾ ಕಪೂರ್ ನಿರ್ಮಾಣದ ದೂರದರ್ಶನ ಧಾರಾವಾಹಿ "ಕ್ಯುಂಕಿ ಸಾಸ್ ಭಿ ಕಭೀ ಬಹೂ ಥಿ" ನಲ್ಲಿ 'ತುಳಸಿ' ಎಂಬ ಪಾತ್ರ ನಿರ್ವಹಿಸಿ ಮನೆಮಾತಾಗಿದ್ದರು.  ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಕಾಣಲಿರುವ ಅಭಿಷೇಕ್ ಬಚ್ಚನ್ ಅಭಿನಯದ "ಆಲ್ ಇಸ್ ವೆಲ್" ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
 
ಸಚಿವರಾಗುವ ಮೊದಲು ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅದರ ಪ್ರಚಾರಕ್ಕಾಗಿ ಯಾವುದೇ ಸಮಯವನ್ನು ಇಡಲಾಗುತ್ತಿಲ್ಲ ಎಂಬ ವಿಷಾದ ಅವರದು. ಇದು ಹೊಸ ಚಿತ್ರ ಅಲ್ಲ . ನನಗೆ ಸಮಯವಿದ್ದಾಗ ಬೇರೆ ಯಾರೂ ಪ್ರಚಾರಕ್ಕೆ ಬರಲು ಸಿದ್ಧರಿರಲಿಲ್ಲ. ಮತ್ತೀಗ ದುರದೃಷ್ಟವಶಾತ್ ಜತೆಯಾಗಿ ಪ್ರಮೋಶನ್‌ ನಡೆಸಲು ಸಮಯ ಹೊಂದಾಣಿಕೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
 
ಗುಜರಾತ್‌ನಿಂದ ರಾಜ್ಯಸಭೆ ಪ್ರವೇಶಿಸಿರುವ ಇರಾನಿ, " ನನಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಕಠಿಣ ಎಂಬುದನ್ನು ಅರ್ಥ ಮಾಡಿಕೊಂಡಿರುವ ಅಭಿಷೇಕ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ . ಪ್ರಸ್ತುತ, ನನಗೆ ಸಮಯ ಇಲ್ಲ," ಎಂದು ಹಗುರವಾದ ಧಾಟಿಯಲ್ಲಿ ಹೇಳಿದರು.

Share this Story:

Follow Webdunia kannada