Select Your Language

Notifications

webdunia
webdunia
webdunia
webdunia

ಸರಣಿ ಗ್ಯಾಂಗ್‌ರೇಪ್ ಎಸಗಿದ ಆರು ಮಂದಿ ಕಾಮುಕರ ಬಂಧನ

ಸರಣಿ ಗ್ಯಾಂಗ್‌ರೇಪ್ ಎಸಗಿದ ಆರು ಮಂದಿ ಕಾಮುಕರ ಬಂಧನ
ವಡೋದರಾ , ಶನಿವಾರ, 24 ಜನವರಿ 2015 (15:31 IST)
ಕಳೆದ ವಾರ ಶಿನೋರಾ ತಾಲೂಕಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.  
 
ಕೂಲಿ ಕಾರ್ಮಿಕರಾದ ಬಂಧಿತ ಆರೋಪಿಗಳು ಶಿನೋರ್ ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ  ಕಳೆದ ಆರು ತಿಂಗಳಲ್ಲಿ ಕನಿಷ್ಠ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವುದಾಗಿ ಹೇಳಿಕೆ ನೀಡಿ ಪೊಲೀಸರಿಗೆ ಆಘಾತ ಮೂಡಿಸಿದ್ದಾರೆ. 
 
ಕಳೆದ ಜನೆವರಿ 17 ರಂದು ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಅಪಹರಿಸಿ ಮನೆಯಿಂದ 1.5 ಕಿ.ಮೀ.ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಗ್ಯಾಂಗ್ ರೇಪ್ ಎಸಗಿದ್ದರು.
 
ಆರೋಪಿಗಳನ್ನು ಮಹೇಶ್ ವಾಸವಾ, ನಿತೇಶ್  ವಾಸವಾ ಮತ್ತು ರಂಜೀತ್ ವಾಸವಾ ಎಂದು ಗುರುತಿಸಲಾಗಿದ್ದು, ಶಿನೋರ್ ತಾಲೂಕಿನ  ಫೋಪಾಲಿಯಾ ಗ್ರಾಮದವರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

Share this Story:

Follow Webdunia kannada