Select Your Language

Notifications

webdunia
webdunia
webdunia
webdunia

ಗಾಂಧಿ ಕ್ವಿಟ್, ಇಂಡಿಯಾ, ಕ್ಲೀನ್ ಇಂಡಿಯಾ ಸಂದೇಶ ನೀಡಿದ್ದರು: ಮೋದಿ

ಗಾಂಧಿ ಕ್ವಿಟ್, ಇಂಡಿಯಾ, ಕ್ಲೀನ್ ಇಂಡಿಯಾ ಸಂದೇಶ ನೀಡಿದ್ದರು: ಮೋದಿ
ನವದೆಹಲಿ , ಗುರುವಾರ, 2 ಅಕ್ಟೋಬರ್ 2014 (10:27 IST)
ಪ್ರಧಾನಮಂತ್ರಿ ನರೇಂದ್ರ ಮೋದಿ  ಮಹಾತ್ಮಾ ಗಾಂಧಿಯ ಜನ್ಮದಿನವಾದ ಇಂದು ನವದೆಹಲಿಯ ರಾಜ್‌ಪಥ್‌ನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಮೋದಿಗೆ ನಟ ಅಮೀರ್ ಖಾನ್ ಸಾಥ್ ನೀಡಿದರು. ಕಸದ ರಾಶಿಯ ಫೋಟೋ ಅಪ್‌ಲೋಡ್ ಮಾಡಿ. ಸ್ವಚ್ಛ ಮಾಡಿದ ಮೇಲೆ ಫೋಟೋವನ್ನು ಕಳಿಸಿ ಎಂದು ಮೋದಿ ಹೇಳಿದರು.
 
ಮೋದಿ ಭಾಷಣದ ಮುಖ್ಯಾಂಶಗಳು
1. ಮಹಾತ್ಮ ಗಾಂಧಿ ನಮಗೆ ಕ್ವಿಟ್ ಇಂಡಿಯಾ ಮತ್ತು ಕ್ಲೀನ್ ಇಂಡಿಯಾ ಸಂದೇಶ ನೀಡಿದರು.
2. ಬಾಪೂಜಿ ಅವರ ಕ್ಲೀನ್ ಇಂಡಿಯಾ ಕನಸು ಇನ್ನೂ ಈಡೇರಿಲ್ಲ.
3. ಸ್ವಚ್ಛ ಭಾರತ್ ಅಭಿಯಾನದ ಲೋಗೋ ಬರೀ ಲೋಗೋ ಮಾತ್ರವಲ್ಲ. ಇದು ಗಾಂಧೀಜಿ ನಾವು ಯಾವಾಗ ಭಾರತವನ್ನು ಸ್ವಚ್ಛಗೊಳಿಸುತ್ತೇವೆಂದು  ನಿಗಾ ವಹಿಸುವಂತಿದೆ.
 
4.ಈ ಕಾರ್ಯಕ್ರಮಕ್ಕೆ ಮುಂಚೆ ಕೆಲಸ ಮಾಡಿದವರಿಗೆ ನಾನು ಅಭಿನಂದಿಸುತ್ತೇನೆ.
5.ಪ್ರಧಾನಮಂತ್ರಿ ಮೊದಲಿಗೆ ಭಾರತದ ಪುತ್ರ, ಆ ಬಳಿಕ ಪ್ರಧಾನಮಂತ್ರಿ
6. ಸ್ವಚ್ಛ ಭಾರತ ಅಭಿಯಾನದ ಗೌರವ ಪಡೆಯಲು ಈ ಸರ್ಕಾರ ಪ್ರಯತ್ನಿಸುತ್ತಿಲ್ಲ.
7. ಸ್ವಚ್ಛ ಮಾಡುವುದು ಕೇವಲ ಗುಡಿಸುವವರ ಕೆಲಸವೇ? ಇದು ನಮ್ಮ ಕರ್ತವ್ಯವಲ್ಲವೇ? ಪೌರರಿಗೆ ಇದರಲ್ಲಿ ಪಾತ್ರವಿಲ್ಲವೇ? ನಾವು ಈ ಮನಸ್ಥಿತಿಯನ್ನು ಬದಲಿಸಬೇಕು.
8. ಭಾರತೀಯರು ಮಂಗಳಗ್ರಹವನ್ನು ಮುಟ್ಟಬಹುದಾದರೆ, ಭಾರತೀಯರು ಬೀದಿ ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲವೇ?
10. ಇದೊಂದು ಕಷ್ಟದ ಅಭಿಯಾನವಾಗಿದ್ದು, 2019ರೊಳಗೆ ಇದನ್ನು ಸಾಧಿಸಬೇಕು.
 
11. ಇದು ಗಾಂಧೀಜಿಯ 150ನೇ ಜನ್ಮದಿನದಂದು ಅವರಿಗೆ ನೀಡುವ ಗೌರವ.
12.ಇದು 125 ಕೋಟಿ ಜನರ ಕೆಲಸವಾಗಿದ್ದು, ಇದನ್ನು 125 ಕೋಟಿ ಬಾರಿ ಹೇಳುತ್ತೇನೆ. ಇದು ಮೋದಿಗೆ ಅಥವಾ ಸರ್ಕಾರದ ಕೆಲಸ ಮಾತ್ರವಲ್ಲ.
13. ಗಾಂಧೀಜಿ ಪ್ರತಿಯೊಂದು ಗ್ರಾಮ ಸ್ವಚ್ಛಗೊಳಿಸಲಿಲ್ಲ.ಆದರೆ ಅವರ ಬದ್ಧತೆ ಈ ಕೆಲಸವನ್ನು ಕೈಗೆತ್ತಿಕೊಳ್ಳುವಂತೆ ಮಿಲಿಯಾಂತರ ಜನರಿಗೆ ಸ್ಫೂರ್ತಿ ನೀಡಿತು.
14. ನಾನು 9 ಜನರಿಗೆ ಸಾರ್ವಜನಿಕ ಸ್ಥಳಗಳಿಗೆ ಬರುವಂತೆ ಸೂಚಿಸಿ ಭಾರತ ಸ್ವಚ್ಛಗೊಳಿಸಲು ಕರೆ ನೀಡಿದ್ದೇನೆ. ಅವರು ಮತ್ತೆ 9 ಜನರನ್ನು ಆಹ್ವಾನಿಸಬೇಕೆಂದು ತಿಳಿಸಿದ್ದೇನೆ. ನಂತರ ನರೇಂದ್ರ ಮೋದಿ  ಸ್ವಚ್ಛತಾ ಶಪಥವನ್ನು ಮಕ್ಕಳಿಗೆ ಬೋಧಿಸಿದರು.

Share this Story:

Follow Webdunia kannada