Webdunia - Bharat's app for daily news and videos

Install App

ಅಂತ್ಯಕ್ರಿಯೆ ನೆಪ:ಮಗಳ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿದ ಅಪ್ಪ !

Webdunia
ಬುಧವಾರ, 17 ನವೆಂಬರ್ 2021 (09:22 IST)
ಮಗಳು ಬೇರೆ ಜಾತಿಯವನನ್ನು ಮದುವೆಯಾದಳು ಎಂಬ ಕೋಪದಿಂದ ತಂದೆ ಆಕೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಹೀನ ಘಟನೆ ಮಧ್ಯಪ್ರದೇಶದ ರಾಟಿಬಾದ್ನಲ್ಲಿ ನಡೆದಿದೆ.
ಆ ಮಹಿಳೆಗೆ 8 ತಿಂಗಳ ಮಗು ಕೂಡ ಇತ್ತು. ಆದರೆ ಆ ಮಗು ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿತ್ತು. ಘಟನೆ ಬಗ್ಗೆ ಕುಟುಂಬದವರು ಮಾಹಿತಿ ನೀಡಿದ ಪ್ರಕಾರ, ಮೃತ ಮಗುವಿನ ಅಂತ್ಯಕ್ರಿಯೆಗಾಗಿ ಮಗಳನ್ನು ಕಾಡಿನ ಸಮೀಪ ಕರೆದುಕೊಂಡು ಹೋದ ಅಪ್ಪ, ಅಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯನ್ನು ವಿವರಿಸಿರುವ ರಾಟಿಬಾದ್ ಠಾಣೆ ಅಧಿಕಾರಿ ಸುದೇಶ್ ತಿವಾರಿ,  ಈಗೆರಡು ದಿನಗಳ ಹಿಂದೆ ಸಂಸಗಡ್ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಮಗುವಿನ ಮೃತದೇಹ ಸಿಕ್ಕಿದೆ. ಅದು ಪತ್ತೆಯಾದ ನಂತರ ತನಿಖೆ ಶುರು ಮಾಡಲಾಯಿತು. ನಂತರ ಆ ಮಹಿಳೆ ಸೆಹೋರ್ ಜಿಲ್ಲೆಯ ಬಿಲ್ಕಿಸ್ಗಂಜ್ನವರು ಎಂಬುದು ಗೊತ್ತಾಯಿತು. ನಂತರ ಅವರ ಕುಟುಂಬದವರನ್ನೆಲ್ಲ ವಿಚಾರಣೆ ಮಾಡಿದ ಸತ್ಯ ಬೆಳಕಿಗೆ ಬಂತು. ಆಕೆ  ಬೇರೆ ಜಾತಿಯವನೊಬ್ಬನನ್ನು ಪ್ರೀತಿಸಿದ್ದಳು. ಆದರೆ ಆತನೊಂದಿಗೆ ಮದುವೆ ಮಾಡಿಕೊಡಲು ಆಕೆಯ ಪಾಲಕರಿಗೆ, ಅದರಲ್ಲೂ ಕೂಡ ತಂದೆಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ನಂತರ ಆಕೆ ಓಡಿಹೋಗಿ ಮದುವೆಯಾದಳು.  ಇಷ್ಟು ದಿನಗಳಲ್ಲಿ ಒಮ್ಮೆಯೂ ಮಹಿಳೆ ತನ್ನ ತವರು ಮನೆಗೆ ಬಂದಿರಲಿಲ್ಲ. ಮಗುವಿನ ಅಂತ್ಯಕ್ರಿಯೆಗೆಂದು ಮಗಳನ್ನೂ ಕರೆದುಕೊಂಡು ಅರಣ್ಯಕ್ಕೆ ಹೋಗಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದಾನೆ. ಎಲ್ಲ ರೀತಿಯ ವಿಚಾರಣೆಯ ಬಳಿಕ 55ವರ್ಷದ ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರ ವಶದಲ್ಲಿಯೇ ಇದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ಐಟಿ, ಇಡಿ ಬಿಟ್ಟು ಕಾಂಗ್ರೆಸ್ ಸರ್ಕಾರ ಬೀಳಿಸ್ತಾರೆ ಹುಷಾರ್: ಎಚ್ಚರಿಕೆ ಕೊಟ್ಟ ಖರ್ಗೆ

National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ

Waqf Bill:ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿರುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ: ಸುಪ್ರೀಂಕೋರ್ಟ್

Bengaluralli ಏನಾಗುತ್ತಿದೆ, ಮಹಿಳೆಗೆ ಮರ್ಮಾಂಗ ತೋರಿಸಿ ಯುವಕನಿಂದ ಅಸಭ್ಯ ವರ್ತನೆ

ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ

ಮುಂದಿನ ಸುದ್ದಿ
Show comments