Webdunia - Bharat's app for daily news and videos

Install App

ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಗೊತ್ತೇ?

Webdunia
ಗುರುವಾರ, 2 ಜೂನ್ 2016 (08:29 IST)
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇ ಬೇಕೆನಿಸುತ್ತಿಲ್ಲ. ಕಾರಣವಲ್ಲದ ಕಾರಣಕ್ಕೆ ಜೀವನಕ್ಕೆ ಇತಿಶ್ರೀ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕೆ ವಯಸ್ಸಿನ ಭೇದವಿಲ್ಲ. ಸಾವು ಏನೆಂದು ತಿಳಿಯದ ಏಳೆಂಟು ವರ್ಷದ ಮಕ್ಕಳಿಂದ ಹಿಡಿದು 90 ವರ್ಷ ದಾಟಿದ ವೃದ್ಧರು ಸಹ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಅಂತವರ ಸಾಲಲ್ಲಿ ಈ 30 ವರ್ಷದ ಮಹಿಳೆಯೂ ಸೇರುತ್ತಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಗೊತ್ತೇ? ತಿಳಿಯಲು ಮುಂದೆ ಓದಿ. 
 
ಮುಂಬೈ ನಿವಾಸಿ ಮಹಿಳೆಯೋರ್ವಳು ತಾನು ಕುಳ್ಳಗಿದ್ದೇನೆ ಎಂಬ ಕಾರಣಕ್ಕೆ ಸಾವಿಗೆ ಶರಣಾಗಿದ್ದಾಳೆ. 
 
ಲಂಡನ್‌ನಲ್ಲಿ ಎಂಬಿಎ ಮುಗಿಸಿ ಬಂದಿದ್ದ ಜಸ್ಕಮಲ್ ಸೇಹಗಲ್‌ಗೆ ತಾನು 4 ಅಡಿ ಎತ್ತರವಿದ್ದೇನೆಂಬುದು ಖಿನ್ನತೆಗೆ ದೂಡಿತ್ತು. ಕಡಿಮೆ ಎತ್ತರ ತನ್ನ ಮದುವೆಗೂ ತೊಡಕಾಗಿದೆ ಎಂಬುದು ಅವಳ ಚಿಂತೆಯಾಗಿತ್ತು. ಅನೇಕ ವರ್ಷಗಳಿಂದ ಈ ಚಿಂತೆಯಲ್ಲಿಯೇ ಬೇಯುತ್ತಿದ್ದ ಆಕೆ ಮಂಗಳವಾರ ತಾನು ವಾಸವಾಗಿದ್ದ ಪೋವಾಯ್ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ. 
 
ಕಳೆದ ವರ್ಷವಷ್ಟೇ ಲಂಡನ್‍ನಿಂದ ಎಂಬಿಎ ಮುಗಿಸಿ ವಾಪಸ್ಸಾಗಿದ್ದ ಮಹಿಳೆ ಖಾಸಗಿ ವಲಯದಲ್ಲಿ ಕೆಲಸಕ್ಕೆ ಹುಡುಕುತ್ತಿದ್ದರು ಎನ್ನಲಾಗಿದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಆಕೆ ಉತ್ತಮ ಕೆಲಸವನ್ನು ಪಡೆದುಕೊಳ್ಳಲು ಯಶಸ್ವಿಯಾಗಿರಲಿಲ್ಲ. ಮೂಲತಃ ಪಂಜಾಬ್ ಮೂಲದ ಕುಟುಂಬ ಹಲವು ವರ್ಷಗಳ ಹಿಂದೆ ಮುಂಬೈನಲ್ಲಿ ವಾಸವಾಗಿತ್ತು.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Boycott Turkey: ಬೆಂಗಳೂರಿನಲ್ಲಿ ಟರ್ಕಿ ಮಾರ್ಬಲ್ ಗೂ ನಿಷೇಧ

Indus Water treaty: ಸಿಂಧೂ ನದಿ ನೀರು ಬಿಡಿ ಎಂದ ಪಾಕಿಸ್ತಾನಕ್ಕೆ ಭಾರತ ಕೊಟ್ಟ ಉತ್ತರವೇನು ಗೊತ್ತಾ

Karnataka Weather: ಕೇರಳಕ್ಕೆ ಮುಂಗಾರು ಪ್ರವೇಶ ಯಾವಾಗ ಇಲ್ಲಿದೆ ವಿವರ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಮುಂದಿನ ಸುದ್ದಿ
Show comments