Webdunia - Bharat's app for daily news and videos

Install App

ಮಿತ್ರನನ್ನು ಕೊಂದು ಮೊಸಳೆಗೆ ತಿನ್ನಿಸಿದರು

Webdunia
ಮಂಗಳವಾರ, 30 ಜೂನ್ 2015 (10:35 IST)
ನಂಬಿದ ಸ್ನೇಹಿತರೇ ಗೆಳೆಯನ ಪ್ರಾಣ ಹಿಂಡಿ ಆತನ ದೇಹವನ್ನು ಮೊಸಳೆಗೆ ಆಹಾರವಾಗಿ ನೀಡಿದ ಅಮಾನುಷ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ಬರೇಲಿ ಜಿಲ್ಲೆಯಲ್ಲಿ ಈ ಪಾತಕ ನಡೆದಿದೆ. ಪ್ರಾಪರ್ಟಿ ಡೀಲರ್ ಆಗಿದ್ದ ಅತುಲ್ ಪಾಂಡೆ ಮಿತ್ರದ್ರೋಹಕ್ಕೆ ಒಳಗಾದ ವ್ಯಕ್ತಿಯಾಗಿದ್ದು ಆತನನ್ನು ಹತ್ಯೆಗೈದ ಮೂರು ಜನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. 
 
ಬರೇಲಿಯ ಸೈನಿಕ್ ಕಾಲೋನಿ ನಿವಾಸಿಯಾಗಿದ್ದ ಅತುಲ್ ಪಾಂಡೆ ಸಂಜಯನಗರದಲ್ಲಿ ವಾಸಿಸುತ್ತಿದ್ದ ಸಂಜಯ್ ಮತ್ತು ವಿಕ್ಕಿ ಎಂಬುವವರ  ಜತೆ ಸೇರಿ ಪ್ರಾಪರ್ಟಿ ಡೀಲಿಂಗ್ ವ್ಯವಹಾರವನ್ನು ಮಾಡುತ್ತಿದ್ದ. 
 
ಕಳೆದ ಏಪ್ರಿಲ್ 21 ರಿಂದ ಅತುಲ್ ನಾಪತ್ತೆಯಾಗಿದ್ದು ಆತನನ್ನು ಕೊನೆಯ ಬಾರಿ ಸಂಜಯ್ ಮತ್ತು ವಿಕ್ಕಿಯ ಜತೆ ನೋಡಿದ್ದಾಗಿ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇಜ್ಜತ್ ನಗರ ಪೊಲೀಸ್ ಠಾಣೆಯಲ್ಲಿ ಪಾಂಡೆ ಪರಿವಾರದವರು ಅಪಹರಣ ಮೊಕದ್ದಮೆಯನ್ನು ದಾಖಲಿಸಿದ್ದರು. 
 
ಮೃತನ ಸ್ನೇಹಿತ ಕೃಷ್ಣಗೋಪಾಲ್, ಎಸ್.ಪಿಯವರನ್ನು ಭೇಟಿ ನೀಡಿ ತನ್ನ ಸಹೋದರನ ನಾಪತ್ತೆಯ ಹಿಂದೆ ವಿಕ್ಕಿ ಮತ್ತು ಸಂಜಯ್ ಕೈವಾಡವಿದೆ ಎಂದು ಆರೋಪ ಮಾಡಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಅಪರಾಧ ದಳಕ್ಕೆ ಹಸ್ತಾಂತರಿಸಲಾಗಿತ್ತು. 
 
ತಿಂಗಳುಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಅಪರಾಧ ದಳದ ಪೊಲೀಸರಿಗೆ ಅತುಲ್ ಮೊಬೈಲ್ ಮತ್ತು ಬೈಕ್ ಪತ್ತೆಯಾಯಿತು. ನಂತರ ಅನುಮಾನದ ಆಧಾರದ ಮೇಲೆ ಸಂಜಯ್, ರೋಹಿತ್ ಮತ್ತು ವಿಕ್ಕಿಯನ್ನು  ಠಾಣೆಯಲ್ಲಿ ವಿಚಾರಣೆಗೊಳಪಡಿಸಿದಾಗ ಕೊನೆಗೂ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. 
 
'ವಂಚನೆಯಿಂದ ಅತುಲ್‌ನನ್ನು ಕರೆಸಿಕೊಂಡು ಹತ್ಯೆಗೈದು ಕಾಲುವೆಗೆ ಎಸೆದವು. ನಾವು ನೋಡುತ್ತಿದ್ದಂತೆ ಅಲ್ಲಿಂದ ಮೊಸಳೆಯೊಂದು ಆತನನ್ನು ತಿಂದು ಹಾಕಿತು. ಆತನ ನಡವಳಿಕೆ ಸರಿ ಇರಲಿಲ್ಲ. ಸಂಜಯ್‌ನ ಪರಿವಾರದ ಮಹಿಳೆಯ ಮೇಲೆ ಆತ ಕೆಟ್ಟದೃಷ್ಟಿಯನ್ನು ಬೀರುತ್ತಿದ್ದ', ಎಂದು ಆರೋಪಿಗಳು ಕೊಲೆಯ ಹಿಂದಿನ ಕಾರಣವನ್ನು ನೀಡಿದ್ದಾರೆ.
 
ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತ ರಾಜೀವ್ ಮಲ್ಹೋತ್ರಾ ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments