Webdunia - Bharat's app for daily news and videos

Install App

ಯುಪಿಎಸ್‌ಸಿ ಸದಸ್ಯರಾಗಿ ಮಾಜಿ ದೆಹಲಿ ಪೊಲೀಸ್ ಆಯುಕ್ತ ಬಸ್ಸಿ ನೇಮಕ

Webdunia
ಮಂಗಳವಾರ, 31 ಮೇ 2016 (18:16 IST)
ದೆಹಲಿ ಪೊಲೀಸ್ ಆಯುಕ್ತ ಹುದ್ದೆಯಲ್ಲಿದ್ದಾಗ ಆಮ್ ಆದ್ಮಿ ಪಕ್ಷದ ಸರಕಾರದೊಂದಿಗಿನ ಜಟಾಪಟಿಯಲ್ಲಿ ಭಾರಿ ವಿವಾದಕ್ಕೆ ಕಾರಣರಾಗಿದ್ದ ಬಿ.ಎಸ್.ಬಸ್ಸಿಯವರನ್ನು ಯುಪಿಎಸ್‌ಸಿಯ ಸದಸ್ಯರನ್ನಾಗಿ ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
 
ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಿಗಳನ್ನು ಸಿದ್ದಪಡಿಸುವ ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಶನ್(ಯುಪಿಎಸ್‌ಸಿ)ಗೆ 60 ವರ್ಷ ವಯಸ್ಸಿನ ಬಸ್ಸಿಯವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆಯೋಗದಲ್ಲಿ ಅಧ್ಯಕ್ಷರನ್ನು ಹೊರತುಪಡಿಸಿ 10 ಸದಸ್ಯರು ಕಾರ್ಯನಿರ್ವಹಿಸುತ್ತಾರೆ. 
 
1977ರ ಬ್ಯಾಚ್ ಅಧಿಕಾರಿಯಾದ 60 ವರ್ಷ ವಯಸ್ಸಿನ ಬಸ್ಸಿ, ದೆಹಲಿ ಪೊಲೀಸ್ ಆಯುಕ್ತರಾಗಿ ನಿವೃತ್ತಿಯನ್ನು ಹೊಂದಿದ್ದಾರೆ. 
 
ಯುಪಿಎಸ್‌ಸಿ ಸದಸ್ಯರ ಅವಧಿ ಐದು ವರ್ಷಗಳಾಗಿದ್ದು, ಮುಂಬರುವ 2021 ರಲ್ಲಿ ಬಸ್ಸಿ ನಿವೃತ್ತಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಬಸ್ಸಿ ದೆಹಲಿ ಪೊಲೀಸ್ ಆಯುಕ್ತರಾಗಿದ್ದಾಗ, ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಧ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಘಟನೆ ಮತ್ತು ಆಮ್ ಆದ್ಮಿ ಪಕ್ಷದ ಸರಕಾರದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ಭಿನ್ನಾಭಿಪ್ರಾಯ ಭಾರಿ ವಿವಾದಗಳಿಗೆ ಕಾರಣವಾಗಿತ್ತು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments