Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಗೆ ಬದನೆಕಾಯಿ-ಬರ್ಗರ್ ವ್ಯತ್ಯಾಸವೇ ಗೊತ್ತಿಲ್ಲವಂತೆ?

ರಾಹುಲ್ ಗಾಂಧಿಗೆ ಬದನೆಕಾಯಿ-ಬರ್ಗರ್ ವ್ಯತ್ಯಾಸವೇ ಗೊತ್ತಿಲ್ಲವಂತೆ?
ಭೂಪಾಲ್ , ಸೋಮವಾರ, 25 ಮೇ 2015 (12:48 IST)
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತೀಕ್ಷ್ಣ ಪ್ರಹಾರ ನಡೆಸಿದ್ದಾರೆ. ಮಧ್ಯಪ್ರದೇಶದ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮೊಂದರಲ್ಲಿ ಪಕ್ಷದ ವಕ್ತಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು "ರಾಹುಲ್ ಗಾಂಧಿಯವರಿಗೆ ಈರುಳ್ಳಿ ಮತ್ತು ಪಿಜ್ಜಾ ಅಥವಾ ಬದನೆಕಾಯಿ- ಬರ್ಗರ್ ನಡುವಿನ ವ್ಯತ್ಯಾಶವೇ ಗೊತ್ತಿಲ್ಲ.  ಆದರೆ ರೈತನಾಯಕನಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಇದರಲ್ಲಿ ಸಫಲರಾಗುವುದಿಲ್ಲ", ಎಂದು ವ್ಯಂಗ್ಯವಾಡಿದ್ದಾರೆ. 
 
ತಮ್ಮ ಸರಕಾರದ ಒಂದು ವರ್ಷದ ಕಾರ್ಯನಿರ್ವಹಣೆಯನ್ನು ಹೊಗಳಿದ ಸಂಸದೀಯ ವ್ಯಬಹಾರಗಳ ರಾಜ್ಯ ಸಚಿವರು, "ದೇಶದಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರಕಾರ ರಾಜಕೀಯವನ್ನು ಹಿಂದಕ್ಕೆ ದೂಡಿ ಮೇಲೆದ್ದು ಅಭಿವೃದ್ಧಿಯತ್ತ ಗಮನ ಹರಿಸಿದೆ", ಎಂದಿದ್ದಾರೆ. 
 
"ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ  ಭಾರತದ ವರ್ಚಸ್ಸು ಜಾಗತಿಕವಾಗಿ ಉನ್ನತ ಮಟ್ಟಕ್ಕೇರಿದೆ. ಸರ್ಕಾರದ ವಿರುದ್ಧ  ಆರೋಪಗಳು ಕೇಳಿಬರುವುದು ಸಾಮಾನ್ಯ. ಆದರೆ ನೀವು ಘನ ಸತ್ಯಗಳ ಜತೆಗೆ  ಮಾಧ್ಯಮ ಹಾಗೂ ಸಾರ್ವಜನಿಕರನ್ನು ತಲುಪುವುದರ ಮೂಲಕ ಪ್ರತಿಪಕ್ಷಗಳಿಗೆ ಸರಿಯಾದ ಉತ್ತರ ನೀಡಬೇಕು," ಎಂದು ಬಿಜೆಪಿ ವಕ್ತಾರನ್ನುದ್ದೇಶಿಸಿ ಅವರು ಹೇಳಿದ್ದಾರೆ. 
 
ಎನ್‌ಡಿಎ ಸರಕಾರ ಸಾರ್ವಜನಿಕರ ಕಲ್ಯಾಣಕ್ಕೋಸ್ಕರ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಜನರು ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಮಾಡುವುದು ನಿಮ್ಮ ಕರ್ತವ್ಯ ಎಂದು ಅವರು  ವಕ್ತಾರರಿಗೆ ಸೂಚಿಸಿದ್ದಾರೆ. 

Share this Story:

Follow Webdunia kannada