Select Your Language

Notifications

webdunia
webdunia
webdunia
webdunia

ನಾನು ಮುಸ್ಲಿಂ ಆದ್ರೆ ಭಯೋತ್ಪಾದಕಿಯಲ್ಲ ಎಂದ ವಿದೇಶಿ ಮಹಿಳೆ

ನಾನು ಮುಸ್ಲಿಂ ಆದ್ರೆ ಭಯೋತ್ಪಾದಕಿಯಲ್ಲ ಎಂದ ವಿದೇಶಿ ಮಹಿಳೆ
ಅಂಬಾಲಾ(ಹರಿಯಾಣಾ) , ಮಂಗಳವಾರ, 1 ಸೆಪ್ಟಂಬರ್ 2015 (19:15 IST)
ಮದ್ಯ ಸೇವಿಸಿದ ಮತ್ತಿನಲ್ಲಿದ್ದ ವಿದೇಶಿ ಮಹಿಳೆಯೊಬ್ಬಳು ನಗರದ ಆಸ್ಪತ್ರೆಯಲ್ಲಿ ಕೋಲಾಹಲವೆಬ್ಬಿಸಿದ್ದಲ್ಲದೇ ನಾನೊಬ್ಬಳು ಮುಸ್ಲಿಂ ಆದರೆ, ನಾನು ಉಗ್ರಗಾಮಿಯಲ್ಲ ಎಂದು ಪೊಲೀಸರ ವಿರುದ್ಧ ವಾಗ್ವಾದಕ್ಕಿಳಿದ ಘಟನೆ ವರದಿಯಾಗಿದೆ. 
 
ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ವಿದೇಶಿ ಮಹಿಳೆಯ ದಾಂಧಲೆ ಕುರಿತಂತೆ ದೂರು ನೀಡಿದಾಗ, ಪೊಲೀಸ್ ಅಧಿಕಾರಿ ಅಮರ್‌ಜಿತ್ ಕೌರ್, ಆಸ್ಪತ್ರೆಗೆ ಬಂದು ವಿದೇಶಿ ಮಹಿಳೆಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.   
 
ಮಹಿಳೆಯ ಭಾಷೆ ಅರ್ಥವಾಗದ ಹಿನ್ನೆಲೆಯಲ್ಲಿ ಅವಳೊಂದಿಗೆ ಮಾತುಕತೆ ನಡೆಸುವುದು ತುಂಬಾ ಕಷ್ಟವಾಯಿತು ಎಂದು ಪೊಲೀಸ್ ಅಧಿಕಾರಿ ಕೌರ್ ತಿಳಿಸಿದ್ದಾರೆ. 
 
ಆರೋಪಿ ವಿದೇಶಿ ಮಹಿಳೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ವಿದೇಶಿ ಮಹಿಳೆ ಕುಡಿದ ಮತ್ತಿನಲ್ಲಿದ್ದು ಆಕೆಯ ಮೈಮೇಲೆ ಗಾಯಗಳಾಗಿರುವುದು ಕಂಡು ಬಂದಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Share this Story:

Follow Webdunia kannada