Select Your Language

Notifications

webdunia
webdunia
webdunia
webdunia

ಲವ್ವಿ ಡವ್ವಿ: ಅಪ್ರಾಪ್ತ ಬಾಲಕಿಯೊಂದಿಗೆ ಓಡಿ ಹೋದ ಕಾಂಗ್ರೆಸ್ ಶಾಸಕ

ಲವ್ವಿ ಡವ್ವಿ: ಅಪ್ರಾಪ್ತ ಬಾಲಕಿಯೊಂದಿಗೆ ಓಡಿ ಹೋದ ಕಾಂಗ್ರೆಸ್ ಶಾಸಕ
ಪಾಟ್ನಾ , ಗುರುವಾರ, 28 ಜನವರಿ 2016 (21:00 IST)
ಬಿಹಾರ್ ರಾಜ್ಯದಲ್ಲಿ ಅಧಿಕಾರರೂಢವಾಗಿರುವ ಮಹಾಮೈತ್ರಿ ಸರಕಾರ ಅಪಹಾಸ್ಯಕ್ಕೀಡಾಗುವಂತಹ ಘಟನೆಗಳು ನಡೆಯುತ್ತಿವೆ. ಇದೀಗ ಬಿಕಾರಾ ವಿಧಾನಸಬಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ಧಾರ್ಥ್, ಪಟೇಲ್‌ಗರದ ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿಯೊಂದಿಗೆ ಎರಡನೇ ಬಾರಿಗೆ ಓಡಿಹೋಗಿದ್ದಾನೆ.
 
ನಗರದ ಖ್ಯಾತ ವೈದ್ಯರ ಪುತ್ರನಾಗಿರುವ ಕಾಂಗ್ರೆಸ್ ಶಾಸಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಆಸಕ್ತಿಕರ ವಿಷಯವೆಂದರೆ, ಕಾಂಗ್ರೆಸ್ ಶಾಸಕ ಸಿದ್ದಾರ್ಥ್, 45 ದಿನಗಳ ಹಿಂದೆ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಇದೇ 17 ವರ್ಷ ವಯಸ್ಸಿನ ಬಾಲಕಿಯೊಂದಿಗೆ ಮೊದಲನೇ ಬಾರಿ ಓಡಿಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  
 
ನಂತರ ಪಾಟ್ನಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಾಸಕನ ಮನವೊಲಿಸಿ ಬಾಲಕಿಯನ್ನು ಪೋಷಕರ ಸುರ್ಪದಿಗೆ ಒಪ್ಪಿಸುವಂತೆ ಕೋರಿದ್ದರು. 
 
ಪೊಲೀಸ್ ತನಿಖೆಯ ಪ್ರಕಾರ ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿರುವುದು ಕಂಡು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada