Select Your Language

Notifications

webdunia
webdunia
webdunia
webdunia

ಭೀಕರ ಬರ: ಒಂದು ಕೊಡ ನೀರಿಗಾಗಿ ಬಾವಿಗಿಳಿಯುತ್ತಿರುವ ನೀರೆಯರು

ಭೀಕರ ಬರ:  ಒಂದು ಕೊಡ ನೀರಿಗಾಗಿ ಬಾವಿಗಿಳಿಯುತ್ತಿರುವ ನೀರೆಯರು
ಬೆಳಗಾವಿ , ಬುಧವಾರ, 20 ಏಪ್ರಿಲ್ 2016 (14:43 IST)
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು ಜನರು ಹನಿ ಹನಿ ನೀರಿಗಾಗಿ ಪರದಾಡುವಂತಾಗಿದೆ. ಗಡಿನಾಡಾದ ಬೆಳಗಾವಿಯ ಸುವಣ೯ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಗ್ರಾಮ ತಾರಿಹಾಳದಲ್ಲಿ ಹನಿ ಹನಿ ನೀರಿಗೂ ತತ್ವಾರ ಎದ್ದಿದ್ದು ಒಂದು ಕೊಡ ನೀರಿಗಾಗಿ ಮಹಿಳೆಯರು ಸುಮಾರು 40 ಅಡಿ ಆಳದ ಬಾವಿಗಿಳಿಯುತ್ತಿದ್ದಾರೆ. 
 
ಭೀಕರ ಬರದಿ೦ದ ಜಲಮೂಲಗಳೆಲ್ಲ ಬತ್ತಿ ಹೋಗಿದ್ದು, ಬಾವಿಯ ತಳದಲ್ಲಿ ಉಳಿದುಕೊಂಡಿರುವ ಹನಿ ನೀರನ್ನು ತುಂಬಿಕೊಳ್ಳಲು ಮಹಿಳೆಯರು ಪ್ರಾಣಾಪಾಯವನ್ನು ಲೆಕ್ಕಿಸದೇ 40 ಅಡಿ ಬಾವಿಗೆ ಇಳಿಯುತ್ತಿದ್ದಾರೆ. 
 
4,800 ಜನಸ೦ಖ್ಯೆ ಹೊ೦ದಿರುವ ಗ್ರಾಮ ಭೀಕರ ಬರದಿ೦ದ ತತ್ತರಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷತನವನ್ನು ಮೆರೆದಿದ್ದಾರೆ. 
 
ಆ ಬಾವಿಯ ನೀರು ಸಿಹಿ ಇರುವುದರಿ೦ದ ಬೇಡ ಎ೦ದರೂ, ಮಹಿಳೆಯರು ಇಳಿದು ನೀರು ತರುತ್ತಾರೆ ಎ೦ದು ಗ್ರಾಮ ಪ೦ಚಾಯಿತಿ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ ಬಾವಿಯಲ್ಲಿ ನೀರು ಅಲ್ಪ ಮಟ್ಟದಲ್ಲಿರುವುದರಿಂದ ಅದನ್ನು ಎತ್ತಲು ಬಾವಿಯೊಳಗೆ ಇಳಿಯುವುದು ಮಹಿಳೆಯರಿಗೆ ಅನಿವಾರ್ಯವೆನಿಸಿದೆ. 
 
ಹಗ್ಗ ಹಿಡಿದು ಕೆಳಕ್ಕಿಳಿಯುವ ಮಹಿಳೆಯರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯವನ್ನು ತಂದುಕೊಳ್ಳುವ ಸಾಧ್ಯತೆಗಳಿವೆ. 
 

Share this Story:

Follow Webdunia kannada