Webdunia - Bharat's app for daily news and videos

Install App

10 ರೂಪಾಯಿಗಾಗಿ 7 ಲಕ್ಷ ಕಳೆದುಕೊಂಡ ಭೂಪ

Webdunia
ಶುಕ್ರವಾರ, 25 ಜುಲೈ 2014 (16:14 IST)
ನಗರದಲ್ಲಿ ವ್ಯಕ್ತಿಯೊಬ್ಬನಿಗೆ 10 ರೂಪಾಯಿ ನೋಟಿನ ಆಮಿಷ ತೋರಿಸಿ ಏಳು ಲಕ್ಷ ರೂಪಾಯಿ ಲೂಟಿ ಹೊಡೆದು ಕಳ್ಳರು ಕೈ ಚಳಕ ಮೆರೆದಿದ್ದಾರೆ. 
 
ಬ್ಯಾಂಕಿನಿಂದ ಹೊರ ಬಂದ ಒಬ್ಬ ವ್ಯಕ್ತಿಯ ಗಮನ ಬೇರೆ ಕಡೆಗೆ ಸೆಳೆಯಲು ಆರೋಪಿಗಳು 10 ರೂಪಾಯಿ ನೋಟು ನೆಲದ ಮೇಲೆ ಬಿಸಾಕಿದ್ದಾರೆ. 10 ರೂಪಾಯಿ ನೋಟಿನತ್ತ ವ್ಯಕ್ತಿ ಗಮನಹರಿಸಿದ ಸಂದರ್ಭದಲ್ಲಿ ಆತನಲ್ಲಿದ್ದ ಏಳು ಲಕ್ಷ ರೂಪಾಯಿಗಳ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.
 
ಈ ಘಟನೆ ಅಮೀರ್‌ಪೇಟ್‌‌ ಪ್ರದೇಶದಲ್ಲಿ ನಿನ್ನೆ ನಡೆದಿದೆ. ಒಬ್ಬ ಖಾಸಗಿ ಉದ್ಯೋಗಿ ಸತ್ಯರಾಮ ಕಾರ್ಯಾಲಯದ ಕೆಲಸದಿಂದ ಬ್ಯಾಂಕಿನಿಂದ ಹಣ ಪಡೆದಿದ್ದನು. ಆತ ಅಲ್ಲಿಯೇ ಇದ್ದ ರಸ್ತೆಯ ಮೇಲಿನ 10 ರೂಪಾಯಿ ನೋಡಿದ್ದಾನೆ. 
 
ಉದ್ಯೋಗಿಯಾಗಿದ್ದ ಸತ್ಯರಾಮ್ ಕಚೇರಿಯ ಕೆಲಸಕ್ಕಾಗಿ ಬ್ಯಾಂಕ್‌ನಿಂದ ಏಳು ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ಬ್ಯಾಂಕ್‌ನಿಂದ ಹೊರಬಂದಾಗ ರಸ್ತೆಯ ಮೇಲೆ 10 ರೂಪಾಯಿ ನೋಟು ಬಿದ್ದಿರುವುದು ಕಾಣಿಸಿದೆ
 
ಆತ ಕೆಳಗೆ ಬಿದ್ದಿದ್ದ ಹತ್ತು ರೂಪಾಯಿ ನೋಟು ತಗೆದುಕೊಳ್ಳಲು ಬಗ್ಗಿದಾಗ ಆರೋಪಿಗಳ ತಂಡದ ಒಬ್ಬ ಸದಸ್ಯ ಆತನ ಹತ್ತಿರದ ಏಳು ಲಕ್ಷ ರೂಪಾಯಿಗಳಿರುವ ಚೀಲವನ್ನು ತಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಸತ್ಯರಾಮ್ ಆರ್‌ಎಸ್‌ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. 
 
ಈ ಪ್ರಕರಣದಲ್ಲಿ ಲೂಟಿಕೋರರು ಇಬ್ಬರಿಂದ ಮೂವರಿರಬಹುದೆಂದು ಫೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments