ನವದೆಹಲಿ: ಇರಾನ್ ಹಾಗೂ ಇಸ್ರೇಲ್ ನಡುವೆ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇಂದು ತುರ್ತು ಸಭೆಯನ್ನು ಕರೆದಿದೆ.
ತುರ್ತು ಸಭೆ ಸೇರುವ ಬಗ್ಗೆ ಇಸ್ರೇಲ್‌ನ ರಾಯಭಾರಿ ಗಿಲಾಡ್ ಎರ್ಡಾನ್ ಅವರು ಪತ್ರ ಬರೆದು ವಿಶ್ವಸಂಸ್ಥೆ ಬಳಿ ಕೇಳಿಕೊಂಡಿದೆ.
ಅದಲ್ಲದೆ ಇರಾನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸುವಂತೆ ಇಸ್ರೇಲ್ ಮನವಿ ಮಾಡಿದೆ.
ಏಪ್ರಿಲ್ 7ರಂದು ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಹಿರಿಯ ಕಮಾಂಡರ್‌ಗಳು ಸೇರಿದಂತೆ 7 ಮಂದಿ ಕಾವಲು ಅಧಿಕಾರಿಗಳು ಮೃತಪಟ್ಟಿದ್ದರು. ಇಸ್ರೇಲ್‌ನ ಅಪರಾಧಗಳಿಗಾಗಿ ತಕ್ಕ ಶಿಕ್ಷೆಯನ್ನು ನೀಡುವ ಶಪಥ ಮಾಡಿರುವ ಇರಾನ್ ಇದೀಗ ಪ್ರತೀಕಾರದ ದಾಳಿ ನಡೆಸುತ್ತಿದೆ.
ಇಸ್ರೇಲ್ ನಿನ್ನೆ ತಡರಾತ್ರಿ 100ಕ್ಕೂ ಹೆಚ್ಚು ಅಧಿಕಾ ಸ್ಫೋಟಕವನ್ನು ಇರಾನ್ ದಾಳಿ ನಡೆಸಿದೆ. ಈ ದೇಶಗಳ ನಡುವಿನ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಈ ಪ್ರದೇಶದಲ್ಲಿನ ಭಾರತದ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳೊಂದಿಗೆ ನಿಕಟ ಸಂಪರ್ಕದಲ್ಲಿರುವಂತೆ ಹೇಳಿಕೊಂಡಿದೆ.