Select Your Language

Notifications

webdunia
webdunia
webdunia
webdunia

ಹೊಸ 500ರ ನೋಟು ಶೀಘ್ರ ಬಿಡುಗಡೆ

ಹೊಸ 500ರ ನೋಟು ಶೀಘ್ರ ಬಿಡುಗಡೆ
ನವದೆಹಲಿ , ಶನಿವಾರ, 17 ಡಿಸೆಂಬರ್ 2016 (11:07 IST)
ಮಹಾತ್ಮಾ ಗಾಂಧಿ ಸರಣಿಯ ಹೊಸ 500 ಮುಖಬೆಲೆ ರೂಪಾಯಿ ನೋಟುಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ.
 
ಈ ನೋಟುಗಳಲ್ಲಿ ಕೆಲವೊಂದು ಬದಲಾವಣೆ ಇರುತ್ತದೆ. ಆದರೆ ಗಾಂಧಿ ಚಿತ್ರವಿರಲಿದೆ. ಈ ನೋಟಿನ ಹಿಂಬದಿಯಲ್ಲಿ ಕೂಡ ಸ್ವಚ್ಛ ಭಾರತ ಲಾಂಛನವಿರುತ್ತದೆ. ಇದೇ ಮೊದಲ ಬಾರಿಗೆ 500ರ ನೋಟಿನಲ್ಲಿ ಫ್ರಿಪಿಕ್ಸ್ ಹಾಗೂ ಸಂಖ್ಯೆಯ ಮಧ್ಯೆ ನಕ್ಷತ್ರದ ಗುರುತಿರುತ್ತದೆ. ಇಲ್ಲಿಯವರೆಗೆ 10ರಿಂದ 100ರ ಒಳಗಿನ ನೋಟುಗಳಲ್ಲಿ ಮಾತ್ರ ನಕ್ಷದ ಗುರುತಿರುತ್ತಿತ್ತು.
 
ಹಳೆಯ 500 ನೋಟು ಬಳಕೆಯನ್ನು ಡಿಸೆಂಬರ್ 15 ರಿಂದ ಸ್ಥಗಿತಗೊಳಿಸಲಾಗಿದೆ. ಆದರೆ ಡಿಸೆಂಬರ್ 30 ರವರೆಗೆ ಅದನ್ನು ಬ್ಯಾಂಕ್‌ಗಳಿಗೆ ಜಮಾ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವೈಪ್‌ ಕಂಪನಿಯ ಎಲೈಟ್ ಮ್ಯಾಕ್ಸ್ ಸ್ಮಾರ್ಟ್‌ಫೋನ್