Select Your Language

Notifications

webdunia
webdunia
webdunia
webdunia

ಪತ್ನಿ ಜತೆ ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ನವವಿವಾಹಿತ

ಪತ್ನಿ ಜತೆ ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ನವವಿವಾಹಿತ
ಅಜ್ಮಿರ , ಶುಕ್ರವಾರ, 17 ಏಪ್ರಿಲ್ 2015 (18:40 IST)
ಅಜ್ಮಿರದ ಯುವಕನೊಬ್ಬ ತಾನು ವಿವಾಹ ಬಂಧನಕ್ಕೆ ಒಳಪಟ್ಟ ದಿನ ಸಂಗಾತಿಯ ಜತೆ ಆಕಾಶದಲ್ಲಿ ಹಾರುವ ಬಹುದಿನಗಳ ಕನಸನ್ನು ನನಸಾಗಿಸಿಕೊಂಡಿದ್ದಾನೆ. 

ವ್ಯಾಪಾರಸ್ಥ ಸಲೀಮ್ ಖುರೇಶಿ ಮಗನಾದ ಝೌನುಲ್ ಅಬಿದಿನ್  ಗುರುವಾರ  ತನ್ನ ಕುಟುಂಬ ವರ್ಗದವರ ಸಮ್ಮುಖದಲ್ಲಿ ಮದುವೆಯಾದ. ವಿವಾಹದ ನಂತರ ನವ ವಧುವರರು ಜೈಪುರದಿಂದ ಅಜ್ಮಿರದವರೆಗೆ  ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರು. 
 
ಅಜ್ಮಿರ್ ತಲುಪಿದ ದಂಪತಿಗಳಿಗೆ ಕುಟುಂಬದ ಸದಸ್ಯರು ಹಾರ್ದಿಕ ಸ್ವಾಗತ ಕೋರಿದರು. ನಂತರ ಅವರಿಬ್ಬರು ಪ್ರಾರ್ಥನೆ ಸಲ್ಲಿಸಲು ಮೊಯ್ನುದ್ದೀನ್ ಚಿಸ್ತಿ ಮಸೀದಿಗೆ ಹೋದರು. 
 
ತನ್ನ ಮದುವೆಯ ದಿನದಂದು ಪತ್ನಿಯೊಂದಿಗೆ ಹೆಲಿಕಾಪ್ಟರ್‌ನಲ್ಲಿ ಹಾರಾಡುವ ವಿಶೇಷ ಕನಸನ್ನು ಹೊಂದಿದ್ದ ಝೈನುಲ್ ಕೊನೆಗೂ ಅದನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. 

Share this Story:

Follow Webdunia kannada