Webdunia - Bharat's app for daily news and videos

Install App

ನೇಪಾಳದಲ್ಲಿ ಹಠಾತ್ ಪ್ರವಾಹ: 105 ಭಾರತೀಯರು ನಾಪತ್ತೆ

ಸಂಪ್ರಿಯ
ಬುಧವಾರ, 26 ಆಗಸ್ಟ್ 2026 (17:27 IST)
Photo Credit X
ನೇಪಾಳದ ರಾಸುವಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹದ ನಂತರ ನಾಪತ್ತೆಯಾದ 291 ವಿದೇಶಿ ಪ್ರಜೆಗಳಲ್ಲಿ ಕನಿಷ್ಠ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.

ನಾಪತ್ತೆಯಾದ ವಿದೇಶಿ ಪ್ರಜೆಗಳಲ್ಲಿ ಅಮೆರಿಕದ ಮೂವರು, ಮಲೇಷ್ಯಾದ 17, ಯುಕೆ (ಬ್ರಿಟನ್)ನ 12, ದಕ್ಷಿಣ ಆಫ್ರಿಕಾದ ನಾಲ್ವರು, ಆಸ್ಟ್ರೇಲಿಯಾದ ಒಬ್ಬರು ಮತ್ತು ನೆದರ್‌ಲ್ಯಾಂಡ್ಸ್‌ನ ಒಬ್ಬರು ಸೇರಿದ್ದಾರೆ. ಇತರ 103 ಮಂದಿಯ ರಾಷ್ಟ್ರೀಯತೆ ಇನ್ನೂ ಖಚಿತವಾಗಬೇಕಿದೆ.

ಟಿಬೆಟ್‌ನ ಗಡಿಯಲ್ಲಿರುವ ನೇಪಾಳದ ಎರಡು ಮಧ್ಯ ಜಿಲ್ಲೆಗಳಲ್ಲಿ ಸಂಭವಿಸಿದ ಹಠಾತ್ ಮತ್ತು ಭಾರಿ ಪ್ರವಾಹವು ಎಂಟು ಮಂದಿಯ ಸಾವಿಗೆ ಕಾರಣವಾಯಿತು. 

ಅಲ್ಲದೆ, ನದಿಯ ದಡದಲ್ಲಿರುವ ವಸತಿ ಪ್ರದೇಶಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿತು ಮತ್ತು ಕನಿಷ್ಠ ಒಂದು ಡಜನ್ ಜಲವಿದ್ಯುತ್ ಯೋಜನೆಗಳಿಗೆ ಹಾನಿ ಮಾಡಿತು.

ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಯಲ್ಲಿ ಪ್ರವಾಹವು ರಭಸದಿಂದ ನುಗ್ಗಿಬಂದಿತು. 

ಇದು ಟಿಬೆಟ್ ಗಡಿಯಲ್ಲಿರುವ ರಾಸುವಾ ಮತ್ತು ಧಾಡಿಂಗ್ ಜಿಲ್ಲೆಗಳ ಮೇಲೆ ಹಾಗೂ ಕಠ್ಮಂಡುವಿನ ನೈಋತ್ಯದಲ್ಲಿರುವ ನುವಾಕೋಟ್ ಜಿಲ್ಲೆಯ ಮೇಲೆ ಪರಿಣಾಮ ಬೀರಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ಆದಷ್ಟು ಬೇಗ ನೇಪಾಳಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ರಾಸುವಾದಲ್ಲಿನ ಸ್ಥಳೀಯ ಮಳೆಯಿಂದಾಗಿ ಈ ಪ್ರವಾಹ ಉಂಟಾಗಿಲ್ಲ; ಬದಲಿಗೆ ಟಿಬೆಟ್ ಭಾಗದಲ್ಲಿ ಸುರಿದ ಭಾರಿ ಮಳೆ ಅಥವಾ ಹಿಮಪಾತದಿಂದಾಗಿ ಇದು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಿದೆ.

ಜಲವಿಜ್ಞಾನ ಮತ್ತು ಹವಾಮಾನ ಇಲಾಖೆಯ ಪ್ರಕಾರ, ಬುಧವಾರದ ಪ್ರವಾಹವು ರಾಸುವಾದಲ್ಲಿನ ಮಳೆಯಿಂದ ಉಂಟಾಗಿಲ್ಲ.

ರಾಸುವಾದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಪ್ರವಾಹ ಉಂಟಾದಂತೆ ಕಂಡುಬರುತ್ತಿಲ್ಲ ಎಂದು ಜಲವಿಜ್ಞಾನ ಮತ್ತು ಹವಾಮಾನ ಇಲಾಖೆಯ ಮಾಹಿತಿ ಅಧಿಕಾರಿ ದಿನಕರ್ ಕಾಯಸ್ಥ ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಪಾಳದ ಪ್ರವಾಹದಲ್ಲಿ ಸಿಲುಕಿರುವ ತಮಿಳರನ್ನು ರಕ್ಷಿಸಲು ಸಿಎಂ ವಿಜಯ್ ಉನ್ನತ ಮಟ್ಟದ ಸಭೆ

ನೇಪಾಳದ ಪ್ರವಾಹದಲ್ಲಿ ಸುಮಾರು 130-140 ಭಾರತೀಯರು ನಾಪತ್ತೆ: ಪ್ರಿಯಾಂಕ್ ಖರ್ಗೆ

ನೇಪಾಳದಿಂದ 21 ಭಾರತೀಯರ ರಕ್ಷಣೆ, ಚೀನಾದಲ್ಲಿ ಸಿಲುಕಿರುವ 200 ಭಾರತೀಯರಿಂದ ರಕ್ಷಣೆಯ ಕೋರಿಕೆ

ಮಳೆಯಿಲ್ಲದೆ ಆತಂಕದಲ್ಲಿರುವ ರೈತರ ಬೆನ್ನಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ: ಡಿಕೆ ಶಿವಕುಮಾರ್‌

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಎಬ್ಬಿಸಿದವರಿಗೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments