Webdunia - Bharat's app for daily news and videos

Install App

ಚಾಕು ತೋರಿಸಿ, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Webdunia
ಶುಕ್ರವಾರ, 29 ಆಗಸ್ಟ್ 2014 (15:31 IST)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಿಲ್ಲುಂತೆ ಕಂಡು ಬರುತ್ತಿಲ್ಲ. ಮಧುವಿಹಾರ ಕ್ಷೇತ್ರದಲ್ಲಿರುವ 16 ವರ್ಷದ ಬಾಲಕಿಯ ಮೇಲೆ 5 ಜನ ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ. 
 
ಮೂಲಗಳ ಪ್ರಕಾರ, ಮಧುವಿಹಾರ ಕ್ಷೇತ್ರದಲ್ಲಿರುವ ಬಾಲಕಿಯೊಬ್ಬಳು ಪಾರ್ಕ್‌‌‌‌‌ನಲ್ಲಿ ತನ್ನ ಸ್ನೇಹಿತೆಯ ಜೊತೆ ಕೂತಿದ್ದಳು. ಅಲ್ಲಿ ಮೂವರು ಯುವಕರು ಬಂದು, ಒತ್ತಾಯ ಪೂರ್ವಕವಾಗಿ ಚಾಕು ತೋರಿಸಿ ಬಾಲಕಿಯನ್ನು ರೈಲ್ವೆ ಹಳಿ ಪಕ್ಕದ ಪೊದೆಯೊಳಗಡೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಐವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಮನೆಗೆ ತಲುಪಿದ ಬಾಲಕಿ ನಡೆದ ಘಟನೆಯನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಾಳೆ. ಕುಟುಂಬದವರು ಪೋಲಿಸರಿಗೆ ಈ ವಿಷಯವನ್ನು ತಿಳಿಸಿದ್ದಾರೆ. 
 
ತಹರಿರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಮಧುವಿಹಾರದ ಪೋಲಿಸರು 20 ವರ್ಷ ವಯಸ್ಸಿನ ಅನಿಲ್‌ ಎನ್ನುವ ಯುವಕನ್ನು ಬಂಧಿಸಿಇ ವಿಚಾರಣೆ ನಡೆಸಿದ್ದಾರೆ. ಘಟನೆಯಲ್ಲಿ ಭಾಗಿಯಾದ ಇತರ ಯುವಕರು ಪರಾರಿಯಾಗಿದ್ದು, ಇವರ ಬಲೆಗೆ ಪೋಲಿಸರು ಜಾಲ ಬೀಸಿದ್ದಾರೆ ಎಂದು ಪೋಲಿಸ್‌ ಅಧಿಕಾರಿಗಳು ತಿಳಿಸಿದ್ದಾರೆ. 
 
 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments