Webdunia - Bharat's app for daily news and videos

Install App

ಮುಂಬೈ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಪ್ಯಾರಾಚೂಟ್‌ಗಳ ಹಾರಾಟ

Webdunia
ಸೋಮವಾರ, 25 ಮೇ 2015 (15:45 IST)
ಮುಂಬೈ ವಿಮಾನ ನಿಲ್ದಾಣದ ವಾಯುಪ್ರದೇಶ ಬಳಿ ಎರಡು ದಿನಗಳ ಹಿಂದೆ 5 ಪ್ಯಾರಾಚೂಟ್‌ಗಳು ಕಾಣಿಸಿಕೊಂಡಿದ್ದು ಭದ್ರತಾ ಸಂಸ್ಥೆಗಳು ಈ ಕುರಿತು ಆತಂಕವನ್ನು ವ್ಯಕ್ತಪಡಿಸಿವೆ. 
ಜೆಟ್ ಏರ್‌ವೇಸ್ ಪೈಲಟ್ ಶನಿವಾರ ಸಂಜೆ 5.55ರ ಸುಮಾರಿಗೆ ಈ 5 ಪ್ಯಾರಾಚೂಟ್‌ಗಳನ್ನು ಗಮನಿಸಿದರು. ಇವು ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಿದ್ದವು ಎಂದು ತಿಳಿದು ಬಂದಿದೆ. 
 
ಈ ಕುರಿತು ವಿಮಾನ ನಿಲ್ದಾಣದ ಪೊಲೀಸರು ಇಲ್ಲಿಯವರೆಗೂ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. 
 
ಎಟಿಸಿ, ಐಎಎಫ್, ಸಿಐಎಸ್ಎಫ್ ಮತ್ತು ಮುಂಬೈ ಪೊಲೀಸರು ಸೇರಿದಂತೆ ಅನೇಕ ಸಂಸ್ಥೆಗಳು ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.
 
ಈ ಪ್ಯಾರಾಚೂಟ್‌ಗಳು ಹೇಗೆ ಬಂದವು, ಯಾರು ಹಾರಿಬಿಟ್ಟರು, ಯಾವ ಉದ್ದೇಶದಿಂದ ಇವು ಬಂದಿದ್ದವು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಇವು ವಿಮಾನ ನಿಲ್ದಾಣದ ಭದ್ರತೆಯ ಮಾಹಿತಿ ಪಡೆಯಲು ಪ್ರಯತ್ನಿಸಿದ್ದವು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಯಾರು ಕೂಡ ದೂರು ದಾಖಲಿಸಿಲ್ಲ ಎಂದು ಉಪ ಜಿಲ್ಲಾಧಿಕಾರಿ ವೀರೇಂದ್ರ ಮಿಶ್ರಾ ತಿಳಿಸಿದ್ದಾರೆ.
 
ವಿಮಾನ ನಿಲ್ದಾಣದಲ್ಲಿನ ಭದ್ರತಾ ಲೋಪದ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments