Select Your Language

Notifications

webdunia
webdunia
webdunia
webdunia

2022ರೊಳಗೆ ಬಡವರಿಗೆ 5ಕೋಟಿ ಮನೆ ನಿರ್ಮಾಣ: ಪ್ರಧಾನಿ ಮೋದಿ

2022ರೊಳಗೆ ಬಡವರಿಗೆ 5ಕೋಟಿ ಮನೆ ನಿರ್ಮಾಣ: ಪ್ರಧಾನಿ ಮೋದಿ
ನಯಾ ರಾಯ್ಪುರ್ , ಸೋಮವಾರ, 22 ಫೆಬ್ರವರಿ 2016 (16:10 IST)
2022ರೊಳಗೆ ಬಡವರಿಗೆ 5 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
 
ನಯಾ ರಾಯ್ಪುರ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅಡಿಗಲ್ಲು ಇಟ್ಟು ಮಾತನಾಡುತ್ತಿದ್ದ ಅವರು ಕೌಶಲ್ಯ ಅಭಿವೃದ್ಧಿ ಅವಶ್ಯಕತೆ ಕುರಿತು ಒತ್ತಿ ಹೇಳಿದರು ಮತ್ತು ಯುವಜನತೆ ಉದ್ಯೋಗ ಸೃಷ್ಟಿಕರ್ತರಾಗಿರಿ ಎಂದು ಕೇಳಿಕೊಂಡರು. 
 
ಸ್ವಾತಂತ್ರ್ಯಾ ನಂತರದಿಂದ ಈಗಲೂ ಸಹ 5 ಕೋಟಿ ಕುಟುಂಬ ತಮ್ಮದೆ ಆದ ಮನೆಯನ್ನು ಹೊಂದಿಲ್ಲ. ಅವರಲ್ಲಿ 2 ಕೋಟಿಯಷ್ಟು ಜನರು ನಗರಗಳಲ್ಲಿ ಮತ್ತು 3 ಕೋಟಿಯಷ್ಟು ಜನರು ಗ್ರಾಮಗಳಲ್ಲಿದ್ದಾರೆ. ಭಾರತ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುವ 2022ನೇ ಇಸವಿಯಲ್ಲಿ ಯಾವ ರೀತಿಯ ಭಾರತ ಬೇಕೆಂದು ಪ್ರತಿಯೊಬ್ಬ ಭಾರತೀಯ ಯೋಚಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
 
20122ರೊಳಗೆ 5 ಕೋಟಿ ಮನೆಗಳನ್ನು ನಿರ್ಮಿಸುವ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಕಾರ್ಯ ನಿರ್ವಹಿಸಲಿವೆ. ಇದು ಮೂಲಭೂತ ವ್ಯವಸ್ಥೆಯ ಯೋಜನೆಯಲ್ಲ. ಇದು ಬಡವರ ಕನಸುಗಳನ್ನು ಬಲಗೊಳಿಸುವ ಉದ್ದೇಶದಿಂದ ಕೈಗೊಳ್ಳುವ ಯೋಜನೆ ಎಂದು ಪ್ರಧಾನಿ ತಿಳಿಸಿದ್ದಾರೆ.
 
ಈ ಉಪಕ್ರಮ ಸಿಮೆಂಟ್, ಇಟ್ಟಿಗೆ ಮತ್ತು ಇತರ ನಿರ್ಮಾಣ ವಸ್ತುಗಳ ಅವಶ್ಯಕತೆಯನ್ನು ಹೊಂದಿರುವುದರಿಂದ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಿ ಹೇಳಿದ್ದಾರೆ. 

Share this Story:

Follow Webdunia kannada