Select Your Language

Notifications

webdunia
webdunia
webdunia
webdunia

ನವೆಂಬರ್ 10ರಿಂದ ದೆಹಲಿ-ಆಗ್ರಾ ನಡುವೆ ಮೊದಲ ಹೈಸ್ಪೀಡ್ ರೈಲು ಸಂಚಾರ

ನವೆಂಬರ್ 10ರಿಂದ ದೆಹಲಿ-ಆಗ್ರಾ ನಡುವೆ ಮೊದಲ ಹೈಸ್ಪೀಡ್ ರೈಲು ಸಂಚಾರ
ನವದೆಹಲಿ , ಭಾನುವಾರ, 31 ಮೇ 2015 (12:51 IST)
ದೆಹಲಿ ಮತ್ತು ಆಗ್ರಾ ನಡುವೆ ಮೊದಲ 160 ಕಿಮೀ ವೇಗದಲ್ಲಿ ಓಡುವ ಹೈಸ್ಪೀಡ್ ರೈಲಿಗೆ  ನವೆಂಬರ್ 10ರಿಂದ ಚಾಲನೆ ನೀಡುವ ನಿರೀಕ್ಷೆಯಿದೆ. ಕಪೂರ್ತಲಾ ರೈಲು ಬೋಗಿಯ ಕಾರ್ಖಾನೆಯು ರೈಲಿನ 14 ಬೋಗಿಗಳನ್ನು ಶೀಘ್ರದಲ್ಲೇ ತಯಾರಿಸುವ ಸಿದ್ಧತೆ ನಡೆಸುತ್ತಿದೆ. ರೈಲ್ ಕೋಚ್ ಕಾರ್ಖಾನೆ ಈಗಾಗಲೇ ಅತಿ ವೇಗದ ರೈಲಿನ ನಾಲ್ಕು ಬೋಗಿಗಳನ್ನು  ತಯಾರಿಸಿದ್ದು, ನವೆಂಬರ್ 10ರೊಳಗೆ ಉಳಿದ 10 ಬೋಗಿಗಳ ನಿರ್ಮಾಣಕ್ಕೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಆರ್‌ಸಿಎಫ್ ಜನರಲ್ ಮ್ಯಾನೇಜರ್ ಪ್ರಮೋದ್ ಕುಮಾರ್ ಹೇಳಿದ್ದಾರೆ.
 
ಆರ್‌ಸಿಎಫ್ ಎಂಜಿನಿಯರ್‌ಗಳು ಆರ್‌ಡಿಎಸ್‌ಒ( ಸಂಶೋಧನಾ ಅಭಿವೃದ್ಧಿ ಮತ್ತು ಗುಣಮಟ್ಟದ ಸಂಸ್ಥೆ)  ಜೊತೆ ಸಮಾಲೋಚಿಸಿ ಶತಾಬ್ದಿ ಮತ್ತು ರಾಜಧಾನಿ ಬೋಗಿಗಳಿಗಿಂತ ಸುಖಪ್ರಯಾಣಕ್ಕಾಗಿ ಕಪ್ಲರ್ ವ್ಯವಸ್ಥೆ ವಿನ್ಯಾಸಗೊಳಿಸುವುದು, ಹೊಗೆ ಮತ್ತು ಅಗ್ನಿ ಗುರುತಿಸುವಿಕೆ ವ್ಯವಸ್ಥೆ ಅಳವಡಿಕೆ ಮತ್ತು ಒಳ ಬಾಗಿಲುಗಳ ಸ್ವಯಂಚಾಲಿತ ಜಾರುವಿಕೆ ಮತ್ತು ಪ್ರಯಾಣಿಕ ಮಾಹಿತಿ ವ್ಯವಸ್ಥೆಯ ಮೂಲಕ ಬೋಗಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ ಎಂದು ಆರ್‌ಸಿಎಫ್ ಜಿಎಂ ತಿಳಿಸಿದರು.  
 
 ದು ಹೈಸ್ಪೀಡ್ ಬೋಗಿಯ ಅಂದಾಜು ವೆಚ್ಚವು 2.25 -2.50 ಕೋಟಿ ರೂ.ಗಳಾಗಿವೆ ಎಂದು ಅವರು ಹೇಳಿದ್ದು, ರೈಲ್ವೆ ಸಚಿವರು ಬಜೆಟ್ ಭಾಷಣದಲ್ಲಿ ಪ್ರಕಟಿಸಿದಂತೆ ಹೈಸ್ಪೀಡ್ ರೈಲುಗಳ ಸಂಚಾರಕ್ಕೆ 10 ಮಾರ್ಗಗಳನ್ನು ರೈಲ್ವೆ ಆಯ್ಕೆ ಮಾಡಿದೆ ಎಂದು ಜಿಎಂ ಹೇಳಿದ್ದಾರೆ. ಈ ರೈಲುಗಳ ಆರಂಭಿಕ ವೆಚ್ಚವು 160 ಕಿಮೀಗಳಾಗಿದ್ದು, ಕ್ರಮೇಣ ಇದನ್ನು  ಸಿಗ್ನಲಿಂಗ್ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಿದ ಬಳಿಕ 200 ಕಿಮೀಗೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದರು.

Share this Story:

Follow Webdunia kannada