Select Your Language

Notifications

webdunia
webdunia
webdunia
webdunia

ಮಾಜಿ ಶಾಸಕ ಸುರೇಶ್ ಗೌಡ ಮನೆಯಲ್ಲಿ ಬೆಂಕಿ ಅನಾಹುತ

ಮಾಜಿ ಶಾಸಕ  ಸುರೇಶ್ ಗೌಡ ಮನೆಯಲ್ಲಿ ಬೆಂಕಿ ಅನಾಹುತ
ಮಂಡ್ಯ , ಶನಿವಾರ, 25 ಅಕ್ಟೋಬರ್ 2014 (09:33 IST)
ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ (ಕಾಂಗ್ರೆಸ್) ಸುರೇಶ್ ಗೌಡರಿಗೆ ಸೇರಿದ ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ಸುಟ್ಟು ಬೂದಿಯಾದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ. 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಟಿಬಿಬಡಾವಣೆಯಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಮನೆಯಲ್ಲಿದ್ದ ಒಂದು ದ್ವಿಚಕ್ರವಾಹನ, ಟಿವಿ, ಕೇಬಲ್ ವೈರ್ ಮತ್ತು ಗೃಹೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಘಟನೆಗೆ ಸ್ಪಷ್ಟ ಕಾರಣ  ತಿಳಿದುಬಂದಿಲ್ಲ. ದುಷ್ಕರ್ಮಿಗಳ ಕೃತ್ಯವಾಗಿರಬಹುದೆಂದು ಊಹಿಸಲಾಗಿದೆ.
 
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada