Webdunia - Bharat's app for daily news and videos

Install App

ಮಗನನ್ನೇ ಮದುವೆಯಾಗುತ್ತಿದ್ದಾನೆ ಈ ಅಪ್ಪ

Webdunia
ಮಂಗಳವಾರ, 26 ಮೇ 2015 (11:10 IST)
ತಂದೆಯೇ ಎನಿಸಿಕೊಂಡವನು ತನ್ನ ಮಗನನ್ನು ಮದುವೆಯಾಗಲು ಮುಂದಾದ ಘಟನೆ ಅಮೆರಿಕದಲ್ಲಿ ನಡೆದಿದೆ. 
ವಾಷಿಂಗ್ಟನ್‍ ನಿವಾಸಿ  ಬಿಲ್ ನೊವಾಕ್ (78) ಕಳೆದ 50 ವರ್ಷಗಳ ಹಿಂದೆ ನಾರ್‍ಮನ್ ಮ್ಯಾಕ್‍ಆರ್ಥರ್‍ (76)ಅವರನ್ನು ದತ್ತು ಸ್ವೀಕರಿಸಿದ್ದು ಕಳೆದ 50 ವರ್ಷಗಳಿಂದ ತಂದೆ ಮಗ ಒಟ್ಟಿಗೆ ಜೀವಿಸುತ್ತಿದ್ದಾರೆ. ಪೆನ್ಸಿಲ್ವೇನಿಯಾ ಕೋರ್ಟ್ ಸಲಿಂಗಿಗಳ ವಿವಾಹಕ್ಕೆ ಅನುಮತಿ ನೀಡದಿದ್ದ ಕಾರಣಕ್ಕೆ ಸಲಿಂಗಿಗಳಾಗಿದ್ದ ಅವರಿಬ್ಬರು ಒಟ್ಟಿಗೆ ಜೀವಿಸಲು ಈ ದತ್ತು ಸ್ವೀಕಾರ ಮಾರ್ಗವನ್ನು ಅನುಸರಿಸಿದ್ದರು. 
 
ಕಳೆದ ವರ್ಷ ಫೆಡರಲ್ ನ್ಯಾಯಾಧೀಶರು ಪೆನ್ಸಿಲ್ವೇನಿಯಾ ಕೋರ್ಟ್ ಸಲಿಂಗ ವಿವಾಹದ ಮೇಲೆ ಹೇರಿದ್ದ ನಿಷೇದವನ್ನು ತೆರವುಗೊಳಿಸಿದ್ದು ಈ ಇಬ್ಬರು ಜೋಡಿಗಳ ಹಾದಿಯನ್ನು ಸುಲಭಗೊಳಿಸಿತ್ತು. 
 
ಧೀರ್ಘಕಾಲದಿಂದ ಒಟ್ಟಿಗೆ ವಾಸಿಸುತ್ತಿರುವ ನಮ್ಮ ಸಂಬಂಧವನ್ನು ಪತಿ ಪತ್ನಿ ಸಂಬಂಧ ಎಂದು ಪರಿಗಣಿಸ ಬೇಕೆಂದು  ಅವರಿಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ದತ್ತು ಪುತ್ರನನ್ನು ಮದುವೆಯಾಗಲು ಅವಕಾಶ ಕೋರಿ ಅಪ್ಪ ನೊವಾಕ್ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ಸ್ವೀಕರಿಸಿದ್ದ ಕೋರ್ಟ್ ದತ್ತು ಸ್ವೀಕಾರವನ್ನು ವಜಾ ಮಾಡಿ ಮದುವೆಯಾಗಲು ಸಮ್ಮತಿಯನ್ನು ನೀಡಿತ್ತು. 
 
ಕೋರ್ಟ್ ಮದುವೆಗೆ ಕಾನೂನಿನ ಮಾನ್ಯತೆ ನೀಡಿದ ಕಾರಣ ಈ ಜೋಡಿಗಳು ಅರ್ಧ ಶತಮಾನದ ಕನಸು ನನಸಾಗಿದೆ. ಅವರಿಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದು ಬೇಸಿಗೆಯಲ್ಲಿ ದೊಡ್ಡದಾಗಿ ಅರತಕ್ಷತೆ ಕಾರ್ಯಕ್ರಮ ಆಯೋಜಿಸಲಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments