Select Your Language

Notifications

webdunia
webdunia
webdunia
webdunia

14ರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 14 ಮಕ್ಕಳ ತಂದೆ

14ರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 14 ಮಕ್ಕಳ ತಂದೆ
ಮಂಗಳೂರು , ಮಂಗಳವಾರ, 8 ಜುಲೈ 2014 (19:20 IST)
ಅಪ್ರಾಪ್ತ ವಯಸ್ಸಿನ ನೆರೆಮನೆಯ ಹುಡುಗಿಯನ್ನು ಕೆಲವು ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರಿನ ಸುರತ್ಕಲ್‌ನಲ್ಲಿ 45 ವರ್ಷದ ಆರೋಪಿಯನ್ನು ಬಂಧಿಸಿ.ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

45 ವರ್ಷ ವಯಸ್ಸಿನ ಹಮೀದ್ ಎಂಬ ಹೆಸರಿನ ಆರೋಪಿ 14 ಮಕ್ಕಳ ತಂದೆಯಾಗಿದ್ದು, ಕಳೆದ 6 ತಿಂಗಳಿಂದ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವುದನ್ನು ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಆತ ಒಪ್ಪಿಕೊಂಡಿದ್ದಾನೆ. ಆಕೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಅತ ಈ ಕೃತ್ಯ ಎಸಗುತ್ತಿದ್ದ. 
 
ಪೀಡಿತ ಹುಡುಗಿ ಯಾವಾಗಲೂ ಖಿನ್ನತೆಯಿಂದ ಇರುತ್ತಿದ್ದುದನ್ನು ಗಮನಿಸಿದ ಆಕೆಯ ಕುಟುಂಬದವರು ಪುಸಲಾಯಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ಆರೋಪಿ ಹಮೀದ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

Share this Story:

Follow Webdunia kannada