Select Your Language

Notifications

webdunia
webdunia
webdunia
webdunia

ತಲೆಯಿಂದ ದುಪಟ್ಟಾ ಜಾರಿದ್ದಕ್ಕೆ 6 ವರ್ಷದ ಪುತ್ರಿಯ ಕೊಲೆ

ತಲೆಯಿಂದ ದುಪಟ್ಟಾ ಜಾರಿದ್ದಕ್ಕೆ 6 ವರ್ಷದ ಪುತ್ರಿಯ ಕೊಲೆ
ಬರೇಲಿ , ಶನಿವಾರ, 3 ಅಕ್ಟೋಬರ್ 2015 (16:27 IST)
ಉತ್ತರಪ್ರದೇಶದಲ್ಲಿ ದಿನೇ ದಿನೇ ಘೋರಾತಿಘೋರ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕೊಂದು ತಾಜಾ ಉದಾಹರಣೆ ಈ ಘಟನೆ. ತಲೆಯ ಮೇಲೆ ಹಾಕಿಕೊಂಡಿದ್ದ ದುಪಟ್ಟಾ ಜಾರಿ ಬಿತ್ತು ಎಂಬ ಕಾರಣವೇ ಅಲ್ಲದ ಕಾರಣಕ್ಕೆ 6 ವರ್ಷದ ಮಗಳನ್ನು ಆಕೆಯ ತಂದೆಯೇ ಅಮಾನುಷವಾಗಿ ಕೊಂದು ಹಾಕಿದ್ದಾನೆ.
 
ಆರು ವರ್ಷದ ಹುಡುಗಿ ಫರ್ಹೀನ್ ಶುಕ್ರವಾರ ಮಧ್ಯಾಹ್ನ ಊಟ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಆಕೆ ತಲೆಗೆ ಸುತ್ತಿಕೊಂಡಿದ್ದ ದುಪಟ್ಟಾ ಜಾರಿ ಕೆಳಕ್ಕೆ ಬಿದ್ದಿದೆ. ಇದರಿಂದ ಕೋಪಗೊಂಡ ತಂದೆ ಆಕೆಯನ್ನು ಎತ್ತಿ ನೆಲಕ್ಕೆ ಪದೇಪದೇ ಬಡಿದಿದ್ದಾನೆ. ಆಕೆಯ ತಾಯಿ ಮಗಳನ್ನು ರಕ್ಷಿಸಲು ನಡೆಸಿದ ಪ್ರಯತ್ನ ವಿಫಲವಾಗಿ ನೆರೆಹೊರೆಯವರನ್ನು ಕರೆ ತರಲು ಓಡಿದ್ದಾಳೆ. ಆದರೆ ಅವರೆಲ್ಲ ಬರುವಷ್ಟರಲ್ಲಿ ಬಾಲೆ ಮೃತಪಟ್ಟಿದ್ದಾಳೆ. ಅಷ್ಟಕ್ಕೆ ಪಾಪಿ ಅಪ್ಪ ಸುಮ್ಮನಾಗಲಿಲ್ಲ. ಆಕೆಯನ್ನು ಹೂಳಲು ಸಮಾಧಿ ಅಗೆಯಲು ಆರಂಭಿಸಿದ್ದಾನೆ. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. 
 
ಮಾನಸಿಕ ಅಸ್ವಸ್ಥನಾಗಿರುವ ಆರೋಪಿ  ಮೂಲಭೂತವಾದಿಯಾಗಿದ್ದ ಎಂದು ನೆರೆಮನೆಯವರು  ತಿಳಿಸಿದ್ದಾರೆ. 
 
ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada