ಮಧ್ಯಪ್ರದೇಶದ ರೈತನೊಬ್ಬನಿಗೆ ತನ್ನ ಗಣಿಗಾರಿಕೆ ಕ್ಷೇತ್ರದಲ್ಲಿ ಆಕಸ್ಮಿಕವಾಗಿ 12.93 ಕ್ಯಾರೆಟ್ ವಜ್ರ ಸಿಕ್ಕಿದ್ದು, ಅದು ಬರೊಬ್ಬರಿ 40 ಲಕ್ಷ ಬೆಲೆಯುಳ್ಳದ್ದಾಗಿದೆ ಎಂದು ತಿಳಿದು ಬಂದಿದೆ. ಪನ್ನಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ವಜ್ರವನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ದೆಹ್ಲಾನ್ ಚೌಕ್ ನಿವಾಸಿ ಅನಂದ್ ಸಿಂಗ್ ಎಂಬಾತನಿಗೆ ಈ ವಜ್ರ ದೊರೆತಿದ್ದು, ಆತನದನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ. ಈ ಬೆಲೆಬಾಳುವ ವಜ್ರವನ್ನು ಪ್ರಕ್ರಿಯೆ ಪ್ರಕಾರ ಹರಾಜು ಮಾಡಿ ಹಣವನ್ನು ಆನಂದ್ ಅವರಿಗೆ ನೀಡಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ವಜ್ರ ಹರಾಜಾದರೆ ಆನಂದ್ ಸಿಂಗ್ಗೆ ಅಂದಾಜು 40 ಲಕ್ಷ ರೂ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.