ಪ್ರಧಾನಿ ಸುರಕ್ಷತಾ ತಂಡದಲ್ಲಿ ನಕಲಿ ಐಪಿಎಸ್ ಅಧಿಕಾರಿ

Webdunia
ಗುರುವಾರ, 5 ಜನವರಿ 2017 (18:19 IST)
ಗುರುಗೋವಿಂದ ಸಿಂಗ್ ಜಿ ಮಹಾರಾಜರ 350ನೇ ಜನ್ಮದಿನಾಚರಣೆ ಪ್ರಯುಕ್ತ ಪಾಟ್ಣಾದಲ್ಲಿಂದು ಆಯೋಜಿಸಲಾಗಿದ್ದ ಪ್ರಕಾಶ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಆಗಮಿಸುವ ಕೆಲ ಕ್ಷಣಗಳ ಮೊದಲು ಬಿಹಾರ ಪೊಲೀಸರು ನಕಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. 

 
ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಆ ಸಮವಸ್ತ್ರಧಾರಿ ನಕಲಿ ಅಧಿಕಾರಿ ನಿರ್ದೇಶನಗಳನ್ನು ನೀಡುತ್ತಿದ್ದನೆನ್ನಲಾಗಿದೆ.
 
ಈತನ ಬಗ್ಗೆ ಇತರ ಪೊಲೀಸರಿಗೆ ಅನುಮಾನ ಬಂದಿದ್ದು ತಕ್ಷಣ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
 
ಗುರುಗೋವಿಂದ ಸಿಂಗ್ ಜಿ ಮಹಾರಾಜರ ಜನ್ಮದಿನ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯವೈರಿಗಳಾದ ಬಿಹಾರ್ ಮುಖ್ಯಮಂತ್ರಿ, ಜೆಡಿ(ಯು) ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಜತೆ ಪ್ರಧಾನಿ ಮೋದಿ ವೇದಿಕೆಯನ್ನು ಹಂಚಿಕೊಂಡರು.
 
ಬಿಹಾರ್ ರಾಜ್ಯಪಾಲ ರಾಮ್ ನಾಥ್ ಕೋವಿಂದ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ರವಿಶಂಕರ್ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಅನೇಕ ಕೇಂದ್ರ ಸಚಿವರು, ಗಣ್ಯರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 
 
ಪ್ರಕಾಶ ಪರ್ವದ ನಿಮಿತ್ತ ವಿಶೇಷ ಅಂಚೆಚೀಟಿಗಳನ್ನು  ಬಿಡುಗಡೆ ಮಾಡಿದ ಅವರು ಅಸ್ಥಾಯಿ ಗುರುದ್ವಾರದಲ್ಲಿ ಆಯೋಜಿಸಲಾಗಿದ್ದ ಲಂಗರ್‌ನಲ್ಲಿ ಕೂಡ ಪಾಲ್ಗೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೈ ಹನುಮಾನ್ ಚಿತ್ರ ಘೋಷಣೆ ನಂತ್ರ ಮಂತ್ರಾಲಯದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ

ಆರೋಗ್ಯ ಇಲಾಖೆಯೇ ಐಸಿಯುನಲ್ಲಿದೆ: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಭಾರತದಲ್ಲಿ ಅತಿ ಹೆಚ್ಚು ಎಚ್‌ಐವಿ ಪ್ರಕರಣಗಳಿರುವ ರಾಜ್ಯ ಯಾವುದು ಗೊತ್ತಾ

ನಾನು ಸಿಎಂ ಆಗಲೂ ಸಮರ್ಥನೂ: ಜಿ ಪರಮೇಶ್ವರ್‌

ಬಿಜೆಪಿ ಮಾತು ಕೇಳಿ ಕೇಸ್ ಹಾಕಿಸಿಕೊಳ್ಳಬೇಡಿ: ಉದ್ಯೋಗಾಂಕ್ಷಿಗಳಿಗೆ ಪ್ರದೀಪ್ ಈಶ್ವರ್ ಕಿವಿಮಾತು

ಮುಂದಿನ ಸುದ್ದಿ
Show comments