Select Your Language

Notifications

webdunia
webdunia
webdunia
webdunia

ಬಿಹಾರದಲ್ಲಿ 1,400 ಶಿಕ್ಷಕರ ರಾಜೀನಾಮೆ

ಬಿಹಾರದಲ್ಲಿ 1,400 ಶಿಕ್ಷಕರ ರಾಜೀನಾಮೆ
ಪಾಟ್ಣಾ , ಶುಕ್ರವಾರ, 3 ಜುಲೈ 2015 (12:18 IST)
ಬಿಹಾರದಲ್ಲಿ ಈಗ ನಕಲಿ ಶಿಕ್ಷಕರ ರಾಜೀನಾಮೆ ಪರ್ವ ಆರಂಭವಾಗಿದೆ. ನಕಲಿ ಅಂಕಪಟ್ಟಿಯನ್ನು ನೀಡಿ ಹುದ್ದೆ ಪಡೆದುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ 1400ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ರಾಜ್ಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಬಿಹಾರ್ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವ ಭಯದ ಹಿನ್ನೆಲೆಯಲ್ಲಿ ನಕಲಿ ಶಿಕ್ಷಕರು ಹುದ್ದೆ ತ್ಯಜಿಸಿದ್ದಾರೆ. 
 
ವಂಚನೆಗೈದಿರುವ ಶಿಕ್ಷಕರು ಜುಲೈ 8 ರೊಳಗೆ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಪಾಟ್ಣಾ ಕೋರ್ಟ್ ಎಚ್ಚರಿಕೆ ನೀಡಿತ್ತು. 
 
ಬಿಹಾರದಲ್ಲಿ ಒಟ್ಟು 3.5 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಅದರಲ್ಲಿ ಹೆಚ್ಚಿನವರು ನಕಲಿ ಪ್ರಮಾಣಪತ್ರಗಳನ್ನು ನೀಡಿ ಕೆಲಸವನ್ನು ಗಿಟ್ಟಿಸಿಕೊಂಡು ವಂಚನೆ ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. 
 
"ನಿಗದಿತ ಗಡುವಿನೊಳಗೆ ರಾಜೀನಾಮೆ ನೀಡದ ನಕಲಿ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಿ ಎಫ್‌ಐಆರ್ ದಾಖಲಿಸಲಾಗುವುದು ಮತ್ತು ಶಿಕ್ಷೆಗೊಳಪಡಿಸಲಾಗುವುದು. ಜತೆಗೆ ಅವರು ಇಲ್ಲಿಯವರೆಗೆ ಪಡೆದಿರುವ ಸಂಬಳ ಮತ್ತು ಇತರ ಸೌಲಭ್ಯಗಳನ್ನು ಹಿಂತಿರುಗಿ ಪಡೆದುಕೊಳ್ಳಲಾಗುವುದು ಎಂದು ಕೋರ್ಟ್ ಎಚ್ಚರಿಸಿದ್ದರಿಂದ ನಕಲಿ ಶಿಕ್ಷಕರು ತಮ್ಮ ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಲು ಪ್ರಾರಂಭಿಸಿದ್ದಾರೆ", ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ  ಆರ್.ಕೆ. ಮಹಾಜನ್ ಹೇಳಿದ್ದಾರೆ.  

Share this Story:

Follow Webdunia kannada