Select Your Language

Notifications

webdunia
webdunia
webdunia
webdunia

ಹಿಂಸಾಚಾರಕ್ಕೆ ಕಾರಣವಾದ ಫೇಸ್‌ಬುಕ್ ಪೋಸ್ಟಿಂಗ್, ಕರ್ಫ್ಯೂ

ಹಿಂಸಾಚಾರಕ್ಕೆ ಕಾರಣವಾದ ಫೇಸ್‌ಬುಕ್ ಪೋಸ್ಟಿಂಗ್, ಕರ್ಫ್ಯೂ
ಖಂಡಾವಾ , ಶುಕ್ರವಾರ, 1 ಆಗಸ್ಟ್ 2014 (09:41 IST)
ಫೇಸ್‌ಬುಕ್‌ನಲ್ಲಿ  ಮಾಡಿದ ಪೋಸ್ಟಿಂಗ್  ಒಂದರಿಂದ  ಕೆರಳಿದ ಗುಂಪೊಂದರಿಂದ ಪ್ರಾರಂಭವಾದ ಗಲಾಟೆ ಭುಗಿಲೆದ್ದು ಹಿಂಸಾಚಾರಕ್ಕೆ ಕಾರಣವಾಗಿ  ಒಬ್ಬ ವಿಮಾ ಸಿಬ್ಬಂದಿ ಮೃತ ಪಟ್ಟ ಘಟನೆ ಮಧ್ಯಪ್ರದೇಶದ ಖಂಡಾವಾದಲ್ಲಿ ನಡೆದಿದೆ. ಘಟನೆಯ ನಂತರ ನಗರದಲ್ಲಿ ಕರ್ಫ್ಯೂ ಘೋಷಿಸಲಾಗಿದ್ದು, ಕಂಡಲ್ಲಿ ಗುಂಡು ಆದೇಶಿಸಲಾಗಿದೆ.

ಬುಧವಾರ ರಾತ್ರಿ ಸುಮಾರು  ಒಂಬತ್ತು ಗಂಟೆಯ ಸುಮಾರಿಗೆ  ಇಮಲಿಪುರ ಎಂಬಲ್ಲಿ ಉದ್ರಿಕ್ತ ಗಲಭೆಕೋರರು ಸುಶೀಲ್ ಕುಮಾರ್ (30)  ಎಂಬಾತನನ್ನು ಗುಂಡು ಹೊಡೆದು ಕೊಂದಿದ್ದಾರೆ. ನಗರದ ಇತರ ಸ್ಥಳಗಳಲ್ಲಿ ಕೂಡ ಸಾರ್ವಜನಿಕ ಆಸ್ತಿಯನ್ನು  ನಾಶಮಾಡಲಾಗಿದ್ದು, ಹಿಂಸೆಯನ್ನು ನಿಯಂತ್ರಿಸಲು  ಪೋಲಿಸರು ಲಾಠಿ ಚಾರ್ಜ್ ಮಾಡಿದರಲ್ಲದೇ ಅಶ್ರುವಾಯುವನ್ನು ಕೂಡ ಪ್ರಯೋಗಿಸಲಾಯಿತು. ಮೃತನ ಪರಿವಾರದವರಿಂದ ಆಸ್ಪತ್ರೆಯಲ್ಲಿ  ತೀವೃ ಪ್ರತಿಭಟನೆ ನಡೆಯಿತು. 
 
ಗುರುವಾರ ಸಿಮಿ ಆತಂಕವಾದಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವುದಿತ್ತು. ಇದರ ಜತೆ ಗಲಭೆಯನ್ನು ತಾಳೆ ಹಾಕಲಾಗುತ್ತಿದೆ. 
 
ಈ ಘಟನೆಯ ನಂತರ  ಸಾಮಾಜಿಕ ಮಾಧ್ಯಮಗಳ ಮೇಲೆ ಒಂದು ದೊಡ್ಡ ಪ್ರಶ್ನೆ ಎದ್ದಿದೆ. ಮುಜಪ್ಫರ್ ನಗರದಲ್ಲಾದ ದಂಗೆಯನ್ನು ಭುಗಿಲೆಬ್ಬಿಸುವಲ್ಲಿ  ಸಾಮಾಜಿಕ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿದ್ದವು.  ಸಾಮಾಜಿಕ ಮಾಧ್ಯಮಗಳ ಸದುಪಯೋಗಕ್ಕಿಂತ ,ದುರುಪಯೋಗವೇ ಹೆಚ್ಚುತ್ತಿದೆ. 

Share this Story:

Follow Webdunia kannada