Select Your Language

Notifications

webdunia
webdunia
webdunia
webdunia

ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಇನ್ನಿಲ್ಲ

ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಇನ್ನಿಲ್ಲ
ಶಿಲ್ಲಾಂಗ್ , ಸೋಮವಾರ, 27 ಜುಲೈ 2015 (21:00 IST)
ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಗರಕ್ಕೆ ಆಗಮಿಸಿದ್ದ ಮಾಜಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೃದಯಾಘಾತವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ.  
 
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅಬ್ದುಲ್ ಕಲಾಂ, ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿರುವಾಗಲೇ ಅನಾರೋಗ್ಯಕ್ಕೆ ಗುರಿಯಾಗಿದ್ದರಿಂದ ಅವರನ್ನು ಬೆಥಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ಐಐಎಂ ಆಯೋಜಿಸಿದ್ದ ಪ್ಲಾನೆಟ್ ಕುರಿತ ಕಾರ್ಯಕ್ರಮದಲ್ಲಿ ಬಾಗವಹಿಸಲು ಕಲಾಂ ಶಿಲ್ಲಾಂಗ್ ನಗರಕ್ಕೆ ಆಗಮಿಸಿದ್ದರು. ಬೆಳಿಗ್ಗೆಯಿಂದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  
 
ಇಂದು ಬೆಳಿಗ್ಗೆ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದ ಕಲಾಂ ವಿಜ್ಞಾನಿಗಳೊಂದಿಗೆ ನಗುನಗುತ್ತಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ರಾಷ್ತ್ರಪತಿ ಆಗುವುದಕ್ಕೂ ಮುನ್ನ ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.) ಮತ್ತು ಇಸ್ರೊದಲ್ಲಿ ವೈಮಾನೀಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸಿದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಾಂತ್ರಜ್ಞಾನವನ್ನು ತಯಾರಿಸಿರುವ ಕಾರಣ ,ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯ)ಎ೦ದು ಕರೆಯುತ್ತಾರೆ.
 
ಸನ್ 1998ರಲ್ಲಿ ಪೋಖ್ರನ್-2 ನ್ಯುಕ್ಲಿಯರ್ ಪರೀಕ್ಷೆಯಲ್ಲಿ, ತಾಂತ್ರಿಕವಾಗಿ ,ರಾಜಕೀಯವಾಗಿ ಪ್ರಧಾನ ಪಾತ್ರವನ್ನು ವಹಿಸಿದರು. ಆದರೂ ಇವರು ಅಪವಾದಗಳಿಂದ ದೂರವಿರಲ್ಲಿಲ್ಲ, ಕೇವಲ ಹೋಮಿ ಜಹಂಗೀರ್ ಭಾಬ ಮತ್ತು ವಿಕ್ರಮ್ ಸಾರಭಾಯಿರವರ ಕೆಲಸವನ್ನು ಮುಂದುವರಿಸಿದರೆಂದು ಹಾಗು ನೂಕ್ಲಿಯರ್ ವಿಜ್ಞಾನದಲ್ಲಿ ಪ್ರಾವಿಣ್ಯವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು.
 
 
ಅಣ್ಣಾ ವಿಶ್ವವಿದ್ಯಾಯಲಯ(ಚೆನ್ನೈ), ಜೆ.ಎಸ್.ಎಸ್ ವಿಶ್ವವಿದ್ಯಾಲಯ (ಮೈಸೂರು) ಮತ್ತು ಅನೇಕ ಸಂಶೋಧನಾಲಯದಲ್ಲಿ ವೈಮಾನಿಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಭ್ರಷ್ಟಾಚಾರದ ಮೇಲೆ 2011ರ ಮೇ ನಲ್ಲಿ ತಮ್ಮ ಧ್ವನಿಯೆತ್ತಿದ್ದರು. ಕಲಾಮ್ ಓರ್ವ ವಿಜ್ಞಾನಿಯು, ತಮಿಳು ಕವಿಯು ಹಾಗೂ ವೀಣಾ ವಾದ್ಯಗಾರರು ಆಗಿದ್ದಾರೆ.
 
ಬಾಲ್ಯ ಮತ್ತು ವಿದ್ಯಾಭ್ಯಾಸ
 
ಇವರ ಜನನ ಅಕ್ಟೋಬರ್ 15, ೧931 ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಟಿಯಲ್ಲಿ ಆಯಿತು. ಇವರ ಬಾಲ್ಯವು ಬಹಳ ಆರ್ಥಿಕ ಬಡತನದಿಂದ ಸಾಗಿತ್ತು. ಮುಂಜಾನೆ 4:೦೦ ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತಿದ್ದರು. ಶಾಲೆಯಲ್ಲಿ ಗಣಿತವು ಮೊದಲ ಪಾಠವಾಗಿತ್ತು. ಶಾಲೆ ಮುಗಿದ ನಂತರ ತಮ್ಮ ಸಂಸೂದ್ದಿನ ಕಲಾಂ ಜೊತೆಗೆ ದಿನಪತ್ರಿಕೆ ಮಾರಲು ಹೋಗುತ್ತಿದ್ದರು.
 
ಇದರಿಂದ ಬಂದ ಹಣದಿಂದ ತಂದೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು. ಕಲಾಂ ಓದಿನಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, ತನ್ನ ಬುದ್ದಿವಂತಿಕೆ ಹಾಗೂ ಕಠಿಣ ಪರಿಶ್ರಮದಿ೦ದ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಗಣಿತಶಾಸ್ತ್ರವನ್ನು ತುಂಬಾ ಆಸಕ್ತಿಯಿಂದ ಕಲಿಯು ತ್ತಿದ್ದರು. ತಮ್ಮ ಪ್ರಾಥಮಿಕ ಶಿಕ್ಷಣದ ನಂತರ, ಕಲಾಂ ಸಂತ ಜೋಸೆಫ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಆದರೆ ಭೌತಶಾಸ್ತ್ರದ ಬಗ್ಗೆ ಆಸಕ್ತಿ ಮೂಡದ ಕಾರಣ, ವೈಮಾನಿಕ ಇಂಜಿನೀಯರ್ ಪದವಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು.
 
ವಿಜ್ಞಾನಿಯಿಂದ ರಾಷ್ಟ್ರಪತಿಯವರೆಗೆ
1958ರಲ್ಲಿ ಮದ್ರಾಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನೋಲಜಿ ಯಿಂದ ವೈಮಾನಿಕ ಇಂಜಿನೀಯರ್‍‌ನಲ್ಲಿ ಪದವಿಯನ್ನು ಪಡೆದರು. ಹಾಗೆಯೇ ಪಿ.ಎಚ್.ಡಿ., ಎಮ್ ಟೆಕ್ ಪದವಿಯನ್ನು ಪಡೆದಿದ್ದಾರೆ. ಡಿ.ಆರ್.ಡಿ.ಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗೂ ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು.
 
ಕಲಾಂರವರು ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. 2002ರ ರಾಷ್ತ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹೆಗಲ್ ವಿರುದ್ಧ ಗೆದ್ದರು. 25 ಜುಲೈ 2002ರಿಂದ 25 ಜುಲೈ 2007ರ ವರೆಗೆ ರಾಷ್ಟಪತಿಯಾಗಿ ಸೇವೆ ಸಲ್ಲಿಸಿದ್ದರು.

Share this Story:

Follow Webdunia kannada