Select Your Language

Notifications

webdunia
webdunia
webdunia
webdunia

ಮಾಜಿ ಸಂಸದ ಎಸ್.ರಾಜಯ್ಯ ಸೊಸೆ ಆತ್ಮಹತ್ಯೆ: ಕುಟುಂಬಸ್ಥರ ಬಂಧನ

ಮಾಜಿ ಸಂಸದ ಎಸ್.ರಾಜಯ್ಯ ಸೊಸೆ ಆತ್ಮಹತ್ಯೆ: ಕುಟುಂಬಸ್ಥರ ಬಂಧನ
ವಾರಂಗಲ್ , ಬುಧವಾರ, 4 ನವೆಂಬರ್ 2015 (15:53 IST)
ತೆಲಂಗಾಣ ರಾಜ್ಯದ ವಾರಂಗಲ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಸ್.ರಾಜಯ್ಯ ಅವರ ಸೊಸೆ ಇಂದು ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸಂಸದ ಎಸ್.ರಾಜಯ್ಯ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
 
ರಾಜಯ್ಯ ಅವರ ಸೊಸೆ ಸಾರಿಕಾ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು, ತಮ್ಮ ಇಬ್ಬರು ಮಕ್ಕಳೊಂದಿಗೆ ಇಂದು ಬೆಂಕಿ ಹಚ್ಚಿಕೊಂಡಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ಸಾರಿಕಾ ಸಂಸದ ರಾಜಯ್ಯ ಅವರ ಪುತ್ರ ಅನಿಲ್ ಅವರನ್ನು 2002ರಲ್ಲಿ ಪ್ರೇಮ ವಿವಾಹವಾಗಿದ್ದರು. ಬಳಿಕ ತನ್ನ ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಈ ಹಿಂದೆಯೂ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಇಂದು ಮೂರನೇ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ ಸಾರಿಕಾ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
 
ಘಟನೆ ತಿಳಿದ ವಾರಂಗಲ್ ನಗರ ಠಾಣೆ ಪೊಲೀಸರು, ಸಂಸದರ ನಿವಾಸಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಇದೇ ವೇಳೆ ಮಾವ ಎಸ್.ರಾಜಯ್ಯ, ಅತ್ತೆ ಮಾಧವಿ ಹಾಗೂ ಪತಿ ಅನಿಲ್ ಮೂವರನ್ನೂ ಬಂಧಿಸಿ ಎಲ್ಲರ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada