Webdunia - Bharat's app for daily news and videos

Install App

ಮೀಸೆ ಬೋಳಿಸಿಕೊಳ್ಳಲು ತಿರಸ್ಕರಿಸಿದ ಸೈನಿಕನ ಕಿವಿ ಕತ್ತರಿಸಿದ ಆರೋಪಿಗಳು

Webdunia
ಬುಧವಾರ, 30 ಜುಲೈ 2014 (16:04 IST)
ಆಘಾತಕಾರಿ ಘಟನೆಯೊಂದರಲ್ಲಿ ಸೈನಿಕನೊಬ್ಬ ತನ್ನ ಮೀಸೆಯನ್ನು ಬೋಳಿಸಿಕೊಳ್ಳಲು ನಿರಾಕರಿಸಿದ್ದರಿಂದ ಆರೋಪಿಗಳು ಆತನಿಗೆ ಬೆದರಿಕೆಯೊಡ್ಡಿದ್ದಲ್ಲದೇ ಕಿವಿಯನ್ನು ಕತ್ತರಿಸಿದ ದಾರುಣ ಘಟನೆ ವರದಿಯಾಗಿದೆ.  
 
ಇಂತಹ ಹೇಯ ಕೃತ್ಯ ಪಾಟ್ನಾದ ಬಿಹ್ತಾ ಪಟ್ಟಣದಲ್ಲಿ ವರದಿಯಾಗಿದೆ.
 
ಪೊಲೀಸ್ ಮೂಲಗಳ ಪ್ರಕಾರ, ಕೌಡಿಯಾ ಗ್ರಾಮದ ನಿವಾಸಿಯಾದ ಮಾಜಿ ಸೈನಿಕ ರಾಮಾನುಜ್ ವರ್ಮಾ ಮನೆಗೆ ರಾತ್ರಿ ಮರಳುತ್ತಿರುವಾಗ ಇಬ್ಬರು ಆರೋಪಿ ಸಹೋದರರಾದ ಲಾಲ್ಕು ಯಾದವ್ ಮತ್ತು ಬಿನಾ ಯಾದವ್ ಅತನನ್ನು ರಸ್ತೆಯಲ್ಲಿ ನಿಲ್ಲಿಸಿ, ಕೂಡಲೇ ಮೀಸೆಯನ್ನು ಬೋಳಿಸುವಂತೆ ಒತ್ತಡ ಹೇರಿದ್ದಾರೆ. ಮತ್ತೆ ನಿನ್ನ ಮುಖದ ಮೇಲೆ ಮೀಸೆ ಕಂಡಲ್ಲಿ ನಾವೇ ನಿನ್ನ ಮೀಸೆಯನ್ನು ಬೋಳಿಸುತ್ತೇವೆ ಎಂದು ಹೆದರಿಸಿದ್ದಾರೆ.    
 
ಆರೋಪಿಗಳ ದೌರ್ಜನ್ಯವನ್ನು ನಾನು ಪ್ರತಿಭಟಿಸಿದ್ದರಿಂದ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ತಮ್ಮ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡ ಆರೋಪಿಗಳು, ಕತ್ತಿಯಿಂದ ನನ್ನ ಕಿವಿಗಳನ್ನು ಕತ್ತರಿಸಿ ನನಗೆ ಸೇರಿದ್ದ ಬೈಕ್ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ಸೈನಿಕ ಪೊಲೀಸರಿಗೆ ದೂರು ನೀಡಿದ್ದಾನೆ.
 
ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments