Select Your Language

Notifications

webdunia
webdunia
webdunia
webdunia

ನೋಟ್ ನಿಷೇಧದ ಬಳಿಕ ಮೊದಲ ಬಜೆಟ್; ದೇಶಾದ್ಯಂತ ಕುತೂಹಲ

ನೋಟ್ ನಿಷೇಧದ ಬಳಿಕ ಮೊದಲ ಬಜೆಟ್; ದೇಶಾದ್ಯಂತ ಕುತೂಹಲ
ನವದೆಹಲಿ , ಮಂಗಳವಾರ, 31 ಜನವರಿ 2017 (19:18 IST)
ನಾಳೆ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ನೋಟ್ ನಿಷೇಧದ ಬಳಿಕ ಮೊದಲ ಬಾರಿಗೆ ಮಂಡನೆಯಾಗುತ್ತಿರುವ ಬಜೆಟ್ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿದೆ. ಇದೇ ಮೊದಲ ಬಾರಿಗೆ ಬಜೆಟ್ ಒಂದು ತಿಂಗಳ ಮೊದಲು ಮಂಡನೆಯಾಗುತ್ತಿರುವುದು ವಿಶೇಷ.
ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ ಮಾಡುವುದಕ್ಕೂ ಮುನ್ನ ಸಂಸತ್‌ನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ವಾರ್ಷಿಕ ಬಜೆಟ್‌ನಲ್ಲಿ ವಿಲೀನಗೊಂಡಿದ್ದು, ಶತಮಾನಗಳಿಂದ ನಡೆದು ಬಂದಿರುವ ಪದ್ಧತಿಯನ್ನು ಕೈ ಬಿಡಲಾಗಿದೆ, ಇದು ಹೊಸ ಆರಂಭ ಎಂದು ವ್ಯಾಖ್ಯಾನಿಸಿದ್ದಾರೆ. 
 
ಬಜೆಟ್ ಅಧಿವೇಶನ ಸಂಪೂರ್ಣವಾಗಿ ಜನರ ಒಳಿತಿಗಾಗಿ ಉಪಯೋಗವಾಗಲಿ. ಅಧಿವೇಶನದಲ್ಲಿ ಸಮರ್ಪಕ ಚರ್ಚೆಗಳಾಗಲಿ ಎಂದು ಸರ್ಕಾರ ನಿರೀಕ್ಷಿಸುತ್ತಿದೆ. ಸುಗಮ ಕಲಾಪಕ್ಕೆ ಸಹಕರಿಸಿ ಎಂದು ಎಲ್ಲಾ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಅವರು ಹೇಳಿದ್ದಾರೆ. 
 
ಹಣಕಾಸು ಸಚಿವ ಸಚಿವ ಅರುಣ್ ಜೇಟ್ಲಿಯವರಿಂದ ಮಂಡನೆಯಾಗುತ್ತಿರುವ ಕೇಂದ್ರ ಬಜೆಟ್ ಮಧ್ಯಮ ವರ್ಗದವರಿಗೆ ಬಂಪರ್‌ ಆಫರ್‌ಗಳನ್ನು ತರಲಿದೆ ಎಂಬ ನಿರೀಕ್ಷೆ ಇದ್ದು, ತೆರಿಗೆಯ ಕನಿಷ್ಠ ಮಿತಿ ಹೆಚ್ಚಳವಾಗುವ ಸಾಧ್ಯತೆಗಳಿವೆ.
 
ಸೇವಾ ತೆರಿಗೆ ಮತ್ತಷ್ಟು ಹೆಚ್ಚಳವಾಗುವ ಸಾದ್ಯತೆಗಳಿದ್ದು, ಮಲ್ಟಿಪ್ಲೆಕ್ಸ್‌‌ಗಳಲ್ಲಿ ಸಿನಿಮಾ, ಹೊಟೆಲ್‌ಗಳಲ್ಲಿ ಆಹಾರ, ವಿಮಾನ ಪ್ರಯಾಣ ದುಬಾರಿಯಾಗುವ ಸಾಧ್ಯತೆ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ ಮೂಟೆಯಲ್ಲಿ ಕೋಟಿ ಕೋಟಿ ಹಣ ಸಾಗಣೆ: ಮೂವರ ಬಂಧನ