ಅತ್ಯಾಚಾರಕ್ಕೆ ಪ್ರತಿರೋಧ: ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಭೀಕರ ಹತ್ಯೆ

Webdunia
ಶನಿವಾರ, 3 ಸೆಪ್ಟಂಬರ್ 2016 (13:45 IST)
ವಿರಾರ್‌ನ 19 ವರ್ಷ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಅವಳ ಗೆಳೆಯನ ಗೆಳೆಯನೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಂದಿರುವ ಘಟನೆ ಸಂಭವಿಸಿದೆ. ರೇಪ್ ಮಾಡುವ ಅವನ ಯತ್ನಕ್ಕೆ ಯುವತಿ ಪ್ರತಿರೋಧಿಸಿದ್ದರಿಂದ ಕೊಡಲಿಯಿಂದ ಕೊಚ್ಚಿ ಪೈಶಾಚಿಕವಾಗಿ ವರ್ತಿಸಿದ್ದಾನೆ.

 ದುರ್ದೈವಿಯನ್ನು ದುಷ್ಕರ್ಮಿ ಸುಮಾರು 17 ಬಾರಿ ಕೊಡಲಿಯಿಂದ ಕೊಚ್ಚಿದ್ದು,  ಪೊಲೀಸರು ಆಗಮಿಸಿದಾಗ ಅವಳ ಕಿಬ್ಬೊಟ್ಟೆಯಲ್ಲಿ ಕೊಡಲಿ ನೆಟ್ಟಿದ್ದನ್ನು ನೋಡಿ ಆಘಾತಗೊಂಡಿದ್ದರು. ವಿವಾ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿನಿ ಐಶ್ವರ್ಯ ಅಗರವಾಲ್ ತನ್ನ ಗೆಳೆಯ ಸೊಹೇಲ್ ಶೇಕ್‌(22)ನನ್ನು ವಿರಾರ್‌ನಲ್ಲಿರುವ ಅವನ ಸ್ನೇಹಿತ ದೀಪಕ್ ವಾಗ್ರಿಯ ಫ್ಲಾಟ್‌ನಲ್ಲಿ ಭೇಟಿ ಮಾಡುತ್ತಿದ್ದಳು.

ತರಕಾರಿ ವ್ಯಾಪಾರಿ ವಾಗ್ರಿ ಮತ್ತು ಅವನ ಪತ್ನಿ ಕೆಲಸಕ್ಕೆ ಹೋದಾಗ, ಜೋಡಿಗಳಿಬ್ಬರು ಫ್ಲಾಟ್‌ನಲ್ಲಿ ಕಾಲಕಳೆಯುತ್ತಿದ್ದರು. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಯೋಜಿಸಿದಂತೆ ಐಶ್ವರ್ಯ ಶೇಕ್‌‍ನನ್ನು ಭೇಟಿ ಮಾಡಲು ಫ್ಲಾಟ್‌ಗೆ ಆಗಮಿಸಿದ್ದಳು. ಶೇಕ್ ಇನ್ನೂ ಬರದಿರುವುದನ್ನು ದುರುಪಯೋಗ ಮಾಡಿಕೊಂಡ ವಾಗ್ರಿ ಐಶ್ವರ್ಯಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ. ಅವಳು ತೀವ್ರ ಪ್ರತಿರೋಧ ತೋರಿದ್ದರಿಂದ ವಾಗ್ರಿ ಕೋಪದ ಭರದಲ್ಲಿ ಕೊಡಲಿಯನ್ನು ಎತ್ತಿಕೊಂಡು ಅವಳನ್ನು ಕೊಚ್ಚಿದ.

ಶೇಕ್ ಅಲ್ಲಿಗೆ ಆಗಮಿಸುವಷ್ಟರಲ್ಲಿ ಐಶ್ವರ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ವಾಗ್ರಿಯನ್ನು ಬಂಧಿಸಿದ್ದರು. ಐಶ್ವರ್ಯ ಶೇಕ್ ಜತೆ ದೈಹಿಕ ಸಂಬಂಧ ಹೊಂದಿದ್ದರಿಂದ ಅವಳನ್ನು ದುರ್ಬಳಕೆ ಮಾಡಬಹುದೆಂದು ತಾನು ಭಾವಿಸಿದ್ದಾಗಿ ವಾಗ್ರಿ ಹೇಳಿದ್ದಾನೆ. ಪೊಲೀಸರು ಆಗಮಿಸಿದಾಗ ಐಶ್ವರ್ಯಳ ದೇಹ ಅರೆನಗ್ನ ಸ್ಥಿತಿಯಲ್ಲಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ವಿಪರೀತ ಚಳಿ ನಡುವೆ ಇಂದು ಈ ಜಿಲ್ಲೆಗಳಲ್ಲಿ ತುಂತುರು ಮಳೆ ಸಂಭವ

25 ಪ್ರಕರಣಗಳಲ್ಲಿ ನ್ಯಾಯಾಲಯದ ವಾರೆಂಟ್ ತಪ್ಪಿಸಿ ಪರಾರಿಯಾಗಿದ್ದವ ಕೊನೆಗೂ ಅರೆಸ್ಟ್‌

MGNREGA ಮರುನಾಮಕರಣದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಕಿಡಿ, ನಾಳೆಯಿಂದ ಪ್ರತಿಭಟನೆ

ದಿಡೀರನೆ ದೆಹಲಿ ಜನತೆ ಬಳಿ ಕ್ಷಮೆಯಾಚಿಸಿದ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಸಿಡ್ನಿ ಗುಂಡಿನ ದಾಳಿಕೋರರಲ್ಲಿ ಒಬ್ಬಾತ ಹೈದರಾಬಾದ್‌ ಮೂಲದವ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments