ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಮೋದಿ ತಾವು ಗೆದ್ದ ನಂತರ ಮಾಡಿರುವ ಟ್ವಿಟ್ ಒಂದು ಹಳೆಯ ಎಲ್ಲಾ ದಾಖಲೆಗಳನ್ನು ಮುರಿದು, ಭಾರತದ ಅತಿ ಹೆಚ್ಚು ರಿಟ್ವಿಟ್ ಪಡೆದ ಟ್ವಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಮ್ಮ ಮೈತ್ರಿಕೂಟ ಗೆಲುವಿನ ಕಡೆ ನಾಗಾಲೋಟದಲ್ಲಿ ಓಡುತ್ತಿರುವುದರಿಂದ ಉಲ್ಲಸಿತರಾದ ಮೋದಿ ಭಾರತ ವಿಜಯಿಯಾಗಿದೆ. ಒಳ್ಳೆಯ ದಿನಗಳು ಬರುತ್ತಿವೆ ಎಂದು ಬರೆದು (भारत की विजय। अच्छे दिन आने वाले हैं।") ಟ್ವಿಟ್ ಮಾಡಿದ್ದರು. ಅವರದನ್ನು ಪ್ರಕಟಿಸಿದ ಸ್ವಲ್ಪ ಸಮಯದಲ್ಲೇ 39,742 ಸಲ ರಿಟ್ವಿಟ್ ಆದ ಟ್ವಿಟ್ 21,691
ಸಲ ಫೇವರೇಟೆಡ್ ಆಯಿತು.
ಈ ಟ್ವಿಟ್ಟರ್ ಅತಿ ಹೆಚ್ಚು ರಿಟ್ವಿಟ್ ಆದ ಟ್ವಿಟ್ ಎಂದು ಟ್ವಿಟ್ಟರ್ ಇಂಡಿಯಾದ ಅಧಿಕೃತ ಖಾತೆ ಕನಫರ್ಮ್ ಮಾಡಿದೆ.
ಭಾರತ ಲೋಕಸಭಾ ಚುನಾವಣೆ-2014 ರಲ್ಲಿ ಮತದಾರರನ್ನು ತಲುಪಲು ಅಭ್ಯರ್ಥಿಗಳು ಟ್ವಿಟ್ಟರ್‌ನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಜನವರಿ 1 ರಿಂದ ಮೇ 12, 2014ರವರೆಗೆ ಚುನಾವಣೆಗೆ ಸಂಬಂಧಿಸಿದಂತೆ 56 ಮಿಲಿಯನ್ ಟ್ವಿಟ್ ಗಳು ಪ್ರಕಟವಾಗಿವೆ ಎಂದು ಟ್ವಿಟ್ಟರ್ ಇಂಡಿಯಾ ಘೋಷಿಸಿದೆ.
ಮೋದಿಯ ಇಂದಿನ ಟ್ವಿಟ್ ಈ ಹಿಂದೆ ಅವರು ಪ್ರಕಟಿಸಿದ ಟ್ವಿಟ್ಟರ್‌ಗಳಿಗಿಂತ 8 ಕ್ಕಿಂತ ಹೆಚ್ಚು ಪಟ್ಟು ರಿಟ್ವೀಟ್ ಆಗಿದೆ. ಅವರ ಹಳೆಯ ಟ್ವಿಟ್ 4842 ರಿಟ್ವಿಟ್‌ಗಳನ್ನು ಪಡೆದುಕೊಂಡಿತ್ತು.
ಲೋಕಸಭಾ ಚುನಾವಣೆಯ ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ