Webdunia - Bharat's app for daily news and videos

Install App

ಅಗ್ನಿ ದುರಂತ: ಮೂರು ತಿಂಗಳ ಮಗು ಸೇರಿ 8 ಮಂದಿ ಸಜೀವ ದಹನ

Webdunia
ಗುರುವಾರ, 30 ಜೂನ್ 2016 (10:22 IST)
ಮೆಡಿಕಲ್ ಶಾಪ್‌ನಲ್ಲಿ ಭೀಕರ ಅಗ್ನಿ ಆಕಸ್ಮಿಕ ನಡೆದು ಮೂರು ತಿಂಗಳ ಮಗು ಸೇರಿದಂತೆ ಒಟ್ಟು 8 ಜನ ಸಜೀವ ದಹನವಾದ ಘಟನೆ ಮುಂಬೈನ ಅಂಧೇರಿ ಪ್ರದೇಶದ ಜುಹುಗಲ್ಲಿಯಲ್ಲಿರುವ ಮೆಡಿಕಲ್ ಶಾಪ್‌ವೊಂದರಲ್ಲಿ ನಡೆದಿದೆ. 3 ತಿಂಗಳ ಮಗು, ಐವರು ಮಕ್ಕಳು ಸೇರಿದಂತೆ ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.
 
ಗುರುವಾರ ನಸುಕಿನ ಜಾವ 5.15ರ ಸುಮಾರಿಗೆ ಈ ಬೆಂಕಿ ಅವಘಡ ನಡೆದಿದ್ದು ತಡರಾತ್ರಿ ಮೆಡಿಕಲ್ ಶಾಪ್‌ವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹತ್ತಿದ ಬೆಂಕಿ ಕಟ್ಟಡದ ಮೊದಲನೇ ಮಹಡಿಗೂ ಹರಡಿ ನಿದ್ರೆಯಲ್ಲಿದವರೆಲ್ಲರೂ ಸಜೀವವಾಗಿ ಸುಟ್ಟು ಹೋಗಿದ್ದಾರೆ. 
 
ಘಟನೆಯಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ತಂಡ ಬೆಂಕಿಯನ್ನು ನಂದಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. 
 
ಮೆಡಿಕಲ್ ಸ್ಟೋರ್ ನೆಲ ಮಹಡಿಯಲ್ಲಿದ್ದು, ಮೊದಲ ಮತ್ತು ಎರಡನೆಯ ಮಹಡಿಯಲ್ಲಿ ಕುಟುಂಬಗಳು ವಾಸವಾಗಿದ್ದವು. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

ಮುಂದಿನ ಸುದ್ದಿ
Show comments