Select Your Language

Notifications

webdunia
webdunia
webdunia
webdunia

ಎಡಪ್ಪಾಡಿ ಪಳನಿಸ್ವಾಮಿ ಅಣ್ಣಾಡಿಎಂಕೆ ಸಿಎಂ ಅಭ್ಯರ್ಥಿ

ಎಡಪ್ಪಾಡಿ ಪಳನಿಸ್ವಾಮಿ ಅಣ್ಣಾಡಿಎಂಕೆ ಸಿಎಂ ಅಭ್ಯರ್ಥಿ
chennai , ಮಂಗಳವಾರ, 14 ಫೆಬ್ರವರಿ 2017 (14:14 IST)
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗುತ್ತಿದ್ದಂತೆ ಅಣ್ಣಾಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಎಡಪ್ಪಾಡಿ ಪಳನಿಸ್ವಾಮಿಯವರನ್ನ ಆಯ್ಕೆ ಮಾಡಲಾಗಿದೆ. ಶಶಿಕಲಾ ಜೈಲು ಸೇರಿದ ಬಳಿಕ ಸಿಎಂ ಆಗುವುದು ನಾನೇ ಎಂದುಕೊಂಡಿದ್ದ ಪನ್ನೀರ್ ಸೆಲ್ವಂಗೆ ಶಾಕ್ ನೀಡುವುದು ಈ ಆಯ್ಕೆಯ ಹಿಂದಿನ ಮಾಸ್ಟರ್ ಪ್ಲಾನ್ ಆಗಿದೆ.


ರೆಸಾರ್ಟ್`ನಲ್ಲೇ ಸಭೆ ನಡೆಸಿದ ಶಶಿಕಲಾ ಪಳನಿಸ್ವಾಮಿಯನ್ನ ಆಯ್ಕೆ ಮಾಡಿದ್ದಾರೆ. ಶಾಸಕರ ಸಹಿಯನ್ನೊಳಗೊಂಡ ಪತ್ರದ ಜೊತೆ ರಾಜ್ಯಪಾಲರನ್ನ ಭೇಟಿ ಮಾಡಲಿರುವ ಎಡಪ್ಪಾಡಿ ಪಳನಿಸ್ವಾಮಿ  ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಯಾರು ಈ ಪಳನಿಸ್ವಾಮಿ..?: ಜಯಲಲಿತಾ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸೇಲಂ ಜಿಲ್ಲೆಯಿಂದಾಯ್ಕೆಯಾಗಿರುವ ಏಕೈಕ  ಅಣ್ಣಾಡಿಎಂಕೆ ಶಾಸಕ. 4 ಬಾರಿ ಶಾಸಕರಾಗಿರುವ ಪಳನಿಸ್ವಾಮಿ ಈ ಬಾರಿ ಡಿಎಂಕೆ ವರಿಷ್ಠ ಕರುಣಾನಿಧಿ ಬೆಂಬಲದಿಂದ ಆಯ್ಕೆಯಾಗಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ. ಕಾವೇರಿ ವಿವಾದದಲ್ಲಿ ಕರ್ನಾಟಕದ ಜೊತೆ ಒಪ್ಪಂದಕ್ಕೆ ಬರುವಲ್ಲಿ ಪಳನಿಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಶಶಿಕಲಾ ಬಣದ ನಾಯಕರಾಗಿ ಎಡಪ್ಪಾಡಿ ಪಳನಿ ಸ್ವಾಮಿ