Select Your Language

Notifications

webdunia
webdunia
webdunia
webdunia

ಮುಂದಿನವಾರ ಹರಿಯಾಣಾ, ಮಹಾರಾಷ್ಟ್ರದ ಚುನಾವಣೆ ದಿನಾಂಕ ಘೋಷಣೆ ಸಾದ್ಯತೆ

ಮುಂದಿನವಾರ ಹರಿಯಾಣಾ, ಮಹಾರಾಷ್ಟ್ರದ ಚುನಾವಣೆ ದಿನಾಂಕ ಘೋಷಣೆ ಸಾದ್ಯತೆ
ನವದೆಹಲಿ , ಶನಿವಾರ, 30 ಆಗಸ್ಟ್ 2014 (15:14 IST)
ಚುನಾವಣೆ ಆಯೋಗ ಮುಂದಿನ ವಾರ ಮಧ್ಯದವರೆಗೆ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸುವ ಸಾಧ್ಯತೆಗಳಿವೆ. ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭೇಯ ಅವಧಿ ಅಕ್ಟೋಬರ್ 27 ಮತ್ತು ನವೆಂಬರ್ 8 ರಂದು ಮುಕ್ತಾಯವಾಗುತ್ತದೆ. 
 
ನಾಲ್ಕು ರಾಜ್ಯಗಳಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಯಲಿವೆ. ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಿದ್ದತೆಯನ್ನು ಪ್ರಾಂಭಮಾಡಿಕೊಂಡಿವೆ, ಈಗ ಕೇವಲ ಚುನಾವಣೆ ಮಾತ್ರ ಎದುರು ನೋಡುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಚುನಾವಣಾ ಆಯೋಗ ಮುಂದಿನ ವಾರದ ಮಧ್ಯದವರೆಗೆ ಮಹಾರಾಷ್ಟ್ರ ಮತ್ತು ಹರಿಯಾಣದ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸಬಹುದಾಗಿದೆ. ಜಾರ್ಖಂಡ ಮತ್ತು ಜಮ್ಮು-ಕಾಶ್ಮೀರದ ವಿಧಾನಸಭೆಯ ಅವಧಿ ಮುಂದಿನ ವರ್ಷ ಜನೆವರಿ 3 ಮತ್ತು 19 ರಂದು ಮುಕ್ತಾಯವಾಗುತ್ತದೆ. 
  
ಗಣೇಶ ಚತುರ್ಥಿ, ದಸರಾ ಮತ್ತುಉ ದಿಪಾವಳಿ ದೃಷ್ಟಿಯಲ್ಲಿರಿಸಿಕೊಂಡು ಮಹಾರಾಷ್ಟ್ರ ಮತ್ತು ಹರಿಯಾಣದ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸಲಾಗಿದೆ ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ. ಜಮ್ಮು-ಕಾಶ್ಮೀರದಲ್ಲಿನ ಚಳಿಗಾಲದ ವಾತಾವರಣ ಮತ್ತು ಜಾರ್ಖಂಡದ ನಕ್ಸಲ್‌ ಪ್ರಭಾವಿತ ಕ್ಷೇತ್ರಗಳ್ಲಿ ಸುರಕ್ಷಾದಳದ ನೇಮಕಾತಿ ಮತ್ತು ಸಪ್ಟೆಂಬರ್ ನಲ್ಲಿ ಮಳೆಯ ಸಂಭವ  ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಎರಡು ರಾಜ್ಯಗಳಲ್ಲಿ ವಿಧಾನಸಭೆ ದಿನಾಂಕ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 
 

Share this Story:

Follow Webdunia kannada