Webdunia - Bharat's app for daily news and videos

Install App

ಪಾಕಿಸ್ತಾನ ದಾಳಿ ನಿಲ್ಲಿಸುವಂತೆ ಗೋಗೆರೆದಿತ್ತು: ಮನೋಹರ್ ಪರಿಕ್ಕರ್

Webdunia
ಶನಿವಾರ, 26 ನವೆಂಬರ್ 2016 (17:51 IST)
ಭಾರತೀಯ ಸೈನಿಕನ ರುಂಡವನ್ನು ಕತ್ತರಿಸಿದ ಪಾಕಿಸ್ತಾನದ ಸೇನೆಯ ವಿರುದ್ಧ ಭಾರತೀಯ ಸೇನೆ ದಾಳಿ ಮಾಡಿದ 24 ಗಂಟೆಗಳಲ್ಲಿಯೇ ಪಾಕ್ ತತ್ತರಿಸಿ ದಯವಿಟ್ಟು ದಾಳಿ ನಿಲ್ಲಿಸಿ ಎಂದು ಗೋಗೆರೆದಿತ್ತು ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
 
ಪ್ರಸಕ್ತ ವಾರದ ಮಂಗಳವಾರದಂದು ಪಾಕಿಸ್ತಾನದ ಸೇನೆ ಭಾರತೀಯ ಸೈನಿಕನ ಶಿರಚ್ಚೇಧ ಮಾಡಿತ್ತು. ಮಾರನೇ ದಿನ ಭಾರತೀಯ ಸೇನೆ ಪಾಕಿಸ್ತಾನದ ಗಡಿಯಲ್ಲಿರುವ ಪೂಂಚ್, ರಜೌರಿ, ಕೇಲ್ ಮತ್ತು ಮಾಚಿಲ್ ಪ್ರದೇಶಗಳಲ್ಲಿ ಮೋರ್ಟಾರ್‌ಗಳಿಂದ ದಾಳಿ ನಡೆಸಿದಾಗ ಒಬ್ಬ ಪಾಕ್ ಸೇನಾಧಿಕಾರಿ ಸೇರಿದಂತೆ ಮೂವರು ಸೈನಿಕರು ಹತರಾಗಿದ್ದರು.
 
ನಮ್ಮ ದಾಳಿಯನ್ನು ನೋಡಿ ಕಂಗೆಟ್ಟ ಪಾಕಿಸ್ತಾನ, ದಯಮಾಡಿ ದಾಳಿ ನಿಲ್ಲಿಸಿ. 10ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆಂದು ಮನವಿ ಮಾಡಿತ್ತು ಎಂದು ತಿಳಿಸಿದ್ದಾರೆ.
 
ದಾಳಿಯನ್ನು ನಿಲ್ಲಿಸಲು ನಮಗೆ ಅಭ್ಯಂತರವಿಲ್ಲ. ಆದರೆ, ಮೊದಲು ಪಾಕಿಸ್ತಾನ ದಾಳಿಯನ್ನು ನಿಲ್ಲಿಸಬೇಕು. ಕಳೆದ ಎರಡು ದಿನಗಳಿಂದ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. 
 
ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಸೇನೆಗೆ ಎಚ್ಚರಿಕೆ ನೀಡಿದ್ದಾಗಿ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತ ಯುದ್ಧವನ್ನು ಬೆಂಬಲಿಸವುದಿಲ್ಲ, ಆದ್ರೆ ನಮ್ಮ ತಂಟೆಗೆ ಬಂದವರನ್ನು ಸುಮ್ಮನೇ ಬಿಡುವುದಿಲ್ಲ: ರಾಜನಾಥ ಸಿಂಗ್‌

ಸೇನೆ, ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್‌: ರಾಯಚೂರಿನಲ್ಲಿ ಮುಸ್ಲಿಂ ವ್ಯಕ್ತಿ ಅರೆಸ್ಟ್‌

India Pakistan: ನಮ್ಮ ದೇಶದಲ್ಲಿನ್ನು ಪಾಕಿಸ್ತಾನ ಧ್ವಜ, ಸರಕು ಮಾರಾಟ ಮಾಡುವಂತಿಲ್ಲ

ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ ವಿಜಯ್ ಶಾಗೆ ಕ್ಲಾಸ್‌ ತೆಗೆದುಕೊಂಡ ಸುಪ್ರೀಂಕೋರ್ಟ್‌

ಪಾಕ್‌ನಲ್ಲಿ ಜಲಕ್ಷಾಮದ ಭೀತಿ: ಸಿಂಧೂ ಜಲಒಪ್ಪಂದ ಅಮಾನತು ಮರು ಪರಿಶೀಲನೆಗೆ ಗೋಗರೆಯುತ್ತಿರುವ ಪಾಕ್‌

ಮುಂದಿನ ಸುದ್ದಿ
Show comments