Daily Horoscope

ಕಂಠಪೂರ್ತಿ ಕುಡಿದು ತನ್ನ ಮದುವೆಯನ್ನೇ ಮರೆತ !

Webdunia
ಶನಿವಾರ, 18 ಮಾರ್ಚ್ 2023 (09:59 IST)
ಪಾಟ್ನಾ : ಬಿಹಾರದ ವರನೊಬ್ಬ ಕಂಠಪೂರ್ತಿ ಕುಡಿದು ಮರುದಿನ ಮದುವೆಗೆ ಹಾಜರಾಗಲು ಮರೆತಿರುವ ವಿಲಕ್ಷಣ ಘಟನೆ ನಡೆದಿದೆ.

ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಹಿಂದಿನ ರಾತ್ರಿ ಖುಷಿಯಲ್ಲಿ ವರ ಮದ್ಯ ಸೇವಿಸಿದ್ದ. ಆದರೆ ಮರುದಿನ ಮದ್ಯದ ಅಮಲಿನಲ್ಲಿ ತನ್ನ ಮದುವೆಯಿದೆ ಎಂಬುದನ್ನ ಮರೆತು ಮದುವೆಗೆ ಗೈರಾಗಿದ್ದಾನೆ.

ಮದುವೆ ಸ್ಥಳದಲ್ಲಿ ವಧು ಮತ್ತು ಆಕೆಯ ಕುಟುಂಬದವರು ವರನಿಗಾಗಿ ಕಾಯುತ್ತಿದ್ದರೂ ಆತ ಬಂದಿರಲಿಲ್ಲ. ಅದಾದ ಒಂದು ದಿನದ ನಂತರ ವರನಿಗೆ ಪ್ರಜ್ಞೆ ಬಂದು ವಧುವಿನ ಮನೆಗೆ ಬಂದಿದ್ದಾನೆ. ಈ ವೇಳೆ ವಧು ನನಗೆ ನೀನು ಬೇಡ ಎಂದು ಮದುವೆಯಾಗಲು ನಿರಾಕರಿಸಿದ್ದಾಳೆ. 

ಅಷ್ಟೇ ಅಲ್ಲದೇ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ವಧುವಿನ ಮನೆಯವರು ಕೂಡ ವರನ ಕುಟುಂಬಕ್ಕೆ ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಕರುಣೆ ಎನ್ನೋದು ಸತ್ತು ಹೋಯ್ತಾ.. ಪಂಕೋಟ್ ಸೇತುವೆಯಿಂದ ಹರಿಯುವ ಸೇತಿ ನದಿಗೆ ಶ್ವಾನವನ್ನು ಎಸೆದ ಮಹಿಳೆ: Video

ಮುಂದಿನ ಸುದ್ದಿ
Show comments