ಅವರನ್ನ ಕಂಡ್ರೆ ಈಗ್ಲೂ ಹೆದರಿಕೆ ಆಗುತ್ತೆ: ಕೊಹ್ಲಿ

Webdunia
ಶನಿವಾರ, 22 ಅಕ್ಟೋಬರ್ 2016 (15:26 IST)

ದೆಹಲಿ: ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರೋ ಕೊಹ್ಲಿ ಬ್ಯಾಟಿಂಗನ್ನು ನೀವೆಲ್ಲರೂ ನೋಡೇ ಇರ್ತೀರಾ. ಅವರ ಅಗ್ರೆಸ್ಸಿವ್ನೆಸ್ ಆಟ ಎಲ್ಲರನ್ನು ಒಂದ್ ಕ್ಷಣ ಯಪ್ಪ.... ಇದೇನ್ ಮಾರಾಯ! ಅಂದುಬಿಡಬಹುದು. ಆದ್ರೆ ಇದೇ ಅಗ್ರೆಸಿವ್ ಬಾಯ್, ಅವರೊಬ್ಬರನ್ನ ಕಂಡರೆ ತುಂಬಾ ಹೆದರುತ್ತಾರೆ.
 


 

ಹೌದು...  ಟೆಸ್ಟ್ ಟೀಮ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಲ್ಯದಿಂದಲೂ ತಮ್ಮ ಕ್ರಿಕೆಟ್ ಕರಿಯರನ್ನ ಕೋಚ್ ಆಗಿದ್ದ ರಾಜಕುಮಾರ್ ಶರ್ಮಾ ಅವರನ್ನು ಕಂಡ್ರೆ ಈಗ್ಲೂ ಪತರಗುಟ್ತಾರೆ. ಅರ್ಥಾತ್ ಏನೋ ತಪ್ಪು ಮಾಡಿದ್ರಾ ಅಂತಾ ಅಂದುಕೊಳ್ಳಬೇಡಿ. ಬದಲಿಗೆ ಅದು ಗುರುವಿಗೆ ಕೊಹ್ಲಿ ನೀಡುವ ಗೌರವ ಅಂತದ್ದು.

 

ಇತ್ತೀಚೆಗಷ್ಟೆ ತಮ್ಮದೇ ಕಥಾಹಂದರವುಳ್ಳ 'ದ ಡ್ರೈವನ್' ಅನ್ನೋ ಪುಸ್ತಕದ ರಿಲೀಸ್ ಕಾರ್ಯಕ್ರಮದಲ್ಲಿ ಕೊಹ್ಲಿ ಮನದಾಳ ಬಿಚ್ಚಿಟ್ಟಿದ್ದಾರೆ. ವಿಶೇಷ ಅಂದ್ರೆ ಕೊಹ್ಲಿಗೆ ತಮ್ಮ ಗುರು ರಾಜಕುಮಾರ್ ಸರ್ ಅಂದ್ರೆ ಅದೆಷ್ಟು ಗೌರವ ಅಂದ್ರೆ, ಚಿಕ್ಕಂದಿನಿಂದಲೂ ಕೋಚ್ ಜೊತೆ ಬೆಳೆದ ಅವರಿಗೆ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ತಂಡದಲ್ಲೂ ರಾಜಕುಮಾರ್ ಅವರೇ ಕೋಚ್ ಹುದ್ದೆ ನಿಭಾಯಿಸುತ್ತಿದಾರೆ. 

 

ಅದೇನೆ ಇರಲಿ. ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆದುನಿಂತಿದ್ದಾನೆ ಎಂದರೆ ಇಲ್ಲದವರು ಬಂದು ತಮ್ಮತನ ಪ್ರದರ್ಶಿಸುತ್ತಾರೆ. ಆದರೆ ಕೊಹ್ಲಿ ಮಾತ್ರ ತಮ್ಮ ಕ್ರಿಕೆಟ್ ಗುರುವಿಗೆ ಈಗಲೂ ಭಯ-ಭಕ್ತಿಯಿಂದ ನಡೆದುಕೊಳ್ಳುತ್ತಾ, ನಾನಿನ್ನು ಚಿಕ್ಕವನು, ಕಲಿಯುವುದು ತುಂಬಾ ಇದೆ ಎಂದು ತೋರಿಸಿದ್ದಾನೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಟ್ ಕಾಯಿನ್ ಹಗರಣ, ಕಾಂಗ್ರೆಸ್ ಯುವ ಮುಖಂಡ ನಲಪಾಡ್‌ಗೆ ಮತ್ತೇ ಸಂಕಷ್ಟ

RCB VS GT Match, ಹಾಲಿ ಚಾಂಪಿಯನ್‌ಗಳೇ ಶುಭವಾಗಲಿ: ಡಿಕೆ ಶಿವಕುಮಾರ್‌

ಇತರೆ ವಿಷಯಗಳ ಕುರಿತು ಚರ್ಚಿಸಲು ಬೇಕಾದಷ್ಟು ಸಮಯ ಇದೆ

ಹಾಸನ: ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್‌

ಸರ್ಕಾರದಲ್ಲಿ ಯಾರಿಗೆ ಕೊಡಬೇಕು ಸಚಿವ ಸ್ಥಾನ, ಕಾಂಗ್ರೆಸ್ ನಲ್ಲಿ ತೀರ್ಮಾನ ಮಾಡೋರು ಇವರೇ

ಮುಂದಿನ ಸುದ್ದಿ
Show comments