Webdunia - Bharat's app for daily news and videos

Install App

ದ್ರಾವಿಡ್ ಅವರ ಅಪ್ಪಟ ಅಭಿಮಾನಿ: ಈಗಿನವರಲ್ಲಿ ಬೂಮ್ರಾ, ಕೊಹ್ಲಿ ಇಷ್ಟ ಎಂದ ನಿವೃತ್ತ ಸಿಜೆಐ ಚಂದ್ರಚೂಡ್

Sampriya
ಸೋಮವಾರ, 25 ನವೆಂಬರ್ 2024 (15:21 IST)
Photo Courtesy X
ನವದೆಹಲಿ: ಕ್ರಿಕೆಟ್‌ ನನ್ನ ಇಷ್ಟವಾದ ಕ್ರೀಡೆ. ಭಾರತದ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಅಪ್ಪಟ ಅಭಿಮಾನಿ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ತಿಳಿಸಿದ್ದಾರೆ.

ನಾನು ಕೆಲಸದ ವೇಳಾಪಟ್ಟಿಗೆ ಅನುಗುಣವಾಗಿ ಸಮಯ ಸಿಕ್ಕಾಗ ಸಾಧ್ಯವಾದಷ್ಟು ಕ್ರಿಕೆಟ್‌ ನೋಡಲು ಬಯಸುತ್ತೇನೆ. ಅದರಲ್ಲೂ ವಿಶೇಷವಾಗಿ ಭಾರತ ತಂಡದ ಆಟವನ್ನು ನೋಡಲು ಪ್ರಯತ್ನಿಸುತ್ತೇನೆ. ಪ್ರಸ್ತುತ ಆಟಗಾರರಲ್ಲಿ ಜಸ್​ಪ್ರೀತ್​ ಬೂಮ್ರಾ, ವಿರಾಟ್ ಕೊಹ್ಲಿ ಅವರೆಂದರೆ ನನಗೆ‌ ಅಚ್ಚುಮೆಚ್ಚು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ನನಗೆ ಕ್ರಿಕೆಟ್ ಆಡಲು ಸಮಯ ಸಿಗುತ್ತಿಲ್ಲ. ಅಲ್ಲದೆ, ನನಗೂ ಸ್ವಲ್ಪ ವಯಸ್ಸಾಗಿದೆ. ಮೊಬೈಲ್‌ನಲ್ಲಿ ಪಂದ್ಯದ ಲೈವ್‌ ವೀಕ್ಷಿಸಲು ಇದುವರೆಗೆ ಸಾಧ್ಯವಾಗಿಲ್ಲ. ಆದರೆ, ಐದರಿಂದ ಏಳು ನಿಮಿಷಗಳ ಹೈಲೈಟ್ಸ್‌ ವಿಡಿಯೊಗಳನ್ನು ವೀಕ್ಷಿಸುತ್ತೇನೆ ಎಂದಿದ್ದಾರೆ.

ಭಾರತ ತಂಡದ ಪಂದ್ಯವಿರುವಾಗ ವಿರಾಟ್ ಕೊಹ್ಲಿ ಹೇಗೆ ಆಡಿದ್ದಾರೆ. ರವಿಚಂದ್ರನ್ ಅಶ್ವಿನ್ ಹೇಗೆ ಬೌಲಿಂಗ್ ಮಾಡಿದ್ದಾರೆ ಅಥವಾ ಬೂಮ್ರಾ ಅವರು ಚೆನ್ನಾಗಿ ಬೌಲ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಪ್ಪದೇ ನೋಡುತ್ತೇನೆ ಎಂದು ಮುಕ್ತವಾಗಿ ಮಾತನಾಡಿದ್ದಾರೆ.

ನವೆಂಬರ್ 10ರಂದು ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಬಳಿಕ ಸುಪ್ರೀಂ ಕೋರ್ಟ್‌ನ 51ನೆಯ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕರಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments