Webdunia - Bharat's app for daily news and videos

Install App

ಆರ್‌ಎಸ್‌ಎಸ್ ನೀತಿಗಳನ್ನು ಅಂಬೇಡ್ಕರ್ ಬೆಂಬಲಿಸಿದ್ದರು: ಆರೆಸ್ಸೆಸ್

Webdunia
ಶುಕ್ರವಾರ, 10 ಏಪ್ರಿಲ್ 2015 (20:49 IST)
ಆರ್‌ ಎಸ್‌ ಎಸ್‌ ಇದೇ ಮೊದಲ ಬಾರಿಗೆಂಬಂತೆ ಸಂವಿಧಾನ ಶಿಲ್ಪಿಯಾಗಿರುವ ಹಾಗೂ ಭಾರತದ ಮಹಾನ್‌ ನಾಯಕರಲ್ಲಿ ಒಬ್ಬರಾಗಿರುವ ಡಾ| ಅಂಬೇಡ್ಕರ್‌ ಮೇಲೆ ನೇತ್ಯಾತ್ಮಕವಾಗಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.

ಆರ್‌ ಎಸ್‌ ಎಸ್‌ ಈ ತನಕ ತನ್ನ ಸಂಸ್ಥಾಪಕ ಕೆ ಬಿ ಹೆಡಗೇವಾರ್‌ ಮತ್ತು ರಾಮಜನ್ಮಭೂಮಿ ಆಂದೋಲನದ ಕುರಿತಾಗಿ ವಿಶೇಷ ಸಂಚಿಕೆಗಳನ್ನು ತಂದಿದೆ. ಆದರೆ ಸಂಗ್ರಹಯೋಗ್ಯ ಸಂಚಿಕೆಯೊಂದನ್ನು, ಅದೂ ದಲಿತ ನಾಯಕ ಡಾ| ಅಂಬೇಡ್ಕರ್‌ ಕುರಿತಾಗಿ, ಹೊರ ತರುತ್ತಿರುವುದು ಇದೇ ಮೊದಲಾಗಿದೆ.

ಭಾರತದ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಘರ್‌ ವಾಪಸಿಯಂತಹ ಧಾರ್ಮಿಕ ಮತಾಂತರವನ್ನು ಬೆಂಬಲಿಸಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿಕೊಂಡಿದೆ.

ಮುಂದಿನ ಮಂಗಳವಾರ ಡಾ| ಅಂಬೇಡ್ಕರ್‌ ಅವರ 125ನೇ ಜನ್ಮದಿನೋತ್ಸವದ ಅಂಗವಾಗಿ ಆರ್‌ಎಸ್‌ಎಸ್‌ ಮುಖವಾಣಿಯಾಗಿರುವ "ದ ಆರ್ಗನೈಸರ್‌ ಮತ್ತು ಪಾಂಚಜನ್ಯ' ಹೊರತರಲಿರುವ ಸಂಗ್ರಹಯೋಗ್ಯ ಸಂಚಿಕೆಯಲ್ಲಿ ಡಾ| ಅಂಬೇಡ್ಕರ್‌ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ಸಂಗತಿಗಳನ್ನು ಜನರಿಗೆ ತಿಳಿಸುವ ಪ್ರಯತ್ನ ನಡೆದಿದೆ.

200 ಪುಟಗಳ ಈ ಬಂಪರ್‌ ಪುಸ್ತಕದಲ್ಲಿ ಅಂಬೇಡ್ಕರ್‌ ಅವರು ಇಸ್ಲಾಮಿಕ್‌ ಆಕ್ರಮಣದ ಬಗ್ಗೆ, ಇಸ್ಲಾಂ ಮತಾಂತರದ ಬಗ್ಗೆ, ಕಮ್ಯುನಿಸಂ ಬಗ್ಗೆ ಹಾಗೂ ಸಂವಿಧಾನದ 307ನೇ ಪರಿಚ್ಛೇದದ ಬಗ್ಗೆ ಆಡಿದ್ದ ಮುಲಾಜಿಲ್ಲದೆ ಮಾತುಗಳನ್ನು ಸಂಗ್ರಹಿಸಿಕೊಡಲಾಗಿದೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments