ಗಂಡ ಮೋದಿ ಮೋದಿ ಎಂದರೆ ಊಟ ಕೊಡ್ಬೇಡಿ: ಅರವಿಂದ್ ಕೇಜ್ರಿವಾಲ್

Krishnaveni K
ಭಾನುವಾರ, 10 ಮಾರ್ಚ್ 2024 (14:01 IST)
Photo Courtesy: Twitter
ನವದೆಹಲಿ: ಒಂದು ವೇಳೆ ನಿಮ್ಮ ಗಂಡಂದಿರು ಮೋದಿ ಮೋದಿ ಎಂದು ಜಪ ಮಾಡಿದರೆ ಅವರಿಗೆ ಊಟ ಬಡಿಸಬೇಡಿ ಎಂದು ಆಪ್ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಹಿಳೆಯರಿಗೆ ತಾಕೀತು ಮಾಡಿದ್ದಾರೆ!

ಅಲ್ಲದೆ, ಮಹಿಳೆಯರಿಗೆ ತನಗೆ ಮತ್ತು ಎಎಪಿ ಪಕ್ಷಕ್ಕೆ ಬೆಂಬಲಿಸುವುದಾಗಿ ಮಾತು ಕೊಡಿ ಎಂದೂ ಕೇಳಿಕೊಂಡಿದ್ದಾರೆ. ದೆಹಲಿಯಲ್ಲಿ ಮಹಿಳೆಯರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ 1,000 ರೂ. ನೀಡುವ ಸರ್ಕಾರೀ ಯೋಜನೆಯ ವಿತರಣಾ ಕಾರ್ಯಕ್ರಮದಲ್ಲಿ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಈ ಮಾತನಾಡಿದ್ದಾರೆ.

‘ಪುರುಷರು ಮೋದಿ ಹೆಸರನ್ನೇ ಜಪ ಮಾಡುತ್ತಿದ್ದಾರೆ. ನಿಮ್ಮ ಗಂಡ ಎಲ್ಲಾದರೂ ಆ ರೀತಿ ಮಾಡಿದರೆ ಅವರಿಗೆ ಈವತ್ತು ಊಟ ಬಡಿಸಲ್ಲ ಎನ್ನಿ. ಎಲ್ಲಾ ಮಹಿಳೆಯರು ತಮ್ಮ ಜೊತೆಗೆ ಕುಟುಂಬಸ್ಥರೂ ಎಎಪಿ ಮತ್ತು ನನಗೆ ಬೆಂಬಲಿಸುವುದಾಗಿ ಪ್ರಮಾಣ ಮಾಡಿ. ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ. ಯಾವತ್ತೂ ನಿಮಗೆ ಬೆಂಬಲವಾಗಿರುವುದು ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ’ ಎಂದಿದ್ದಾರೆ.

‘ನಿಮ್ಮ ಮನೆಯ ಗಂಡಸರಿಗೆ ಹೇಳಿ ನಾನು ಉಚಿತ ವಿದ್ಯುತ್ ನೀಡಿದ್ದೇನೆ, ಬಸ್ ಟಿಕೆಟ್ ನೀಡಿದ್ದೇನೆ, ಈಗ ಪ್ರತೀ ಮಹಿಳೆಗೆ ಮಾಸಿಕವಾಗಿ 1000 ರೂ. ನೀಡುತ್ತಿದ್ದೇನೆ. ಬಿಜೆಪಿ ಏನು ಮಾಡಿದೆ ಕೇಳಿ. ಬಿಜೆಪಿಗೆ ಯಾಕೆ ವೋಟ್ ಕೊಡಬೇಕು? ಈ ಬಾರಿ ಎಎಪಿಗೆ ವೋಟ್ ಕೊಡಿ’ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಮುಂದಿನ ಸುದ್ದಿ
Show comments