Select Your Language

Notifications

webdunia
webdunia
webdunia
webdunia

ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್‌ರನ್ನು ಉಗ್ರರೆನ್ನಬೇಡಿ

ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್‌ರನ್ನು ಉಗ್ರರೆನ್ನಬೇಡಿ
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2016 (14:03 IST)
ಸ್ವಾತಂತ್ರ್ಯ ಹೋರಾಟಗಾರರನ್ನು ಉಲ್ಲೇಖಿಸುವಾಗ ಉಗ್ರರೆಂಬ ಪದ ಬಳಸಬೇಡಿ, ಪ್ರಸ್ತುತ ಆ ಪದಕ್ಕೆ ಬೇರೆ ಅರ್ಥವಿದ್ದು ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಸೂಚಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ದೆಹಲಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದೆ

ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ಪಠ್ಯಕ್ರಮದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸೂರ್ಯಾ ಸೇನ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಂತ್ರಿಕಾರಿ ಉಗ್ರರು ಉಲ್ಲೇಖಿಸಲಾಗಿದೆ. 
 
ಇತಿಹಾಸಕಾರರಾದ ಬಿಪಿನ್ ಚಂದ್ರ ಮತ್ತು ಮೃದುಲಾ ಮುಖರ್ಜಿ ಎಂಬ ಲೇಖಕರು ಈ ವಿವಾದಿತ ಪಠ್ಯ ' ಭಾರತದ ಸ್ವಾತಂತ್ರ್ಯ ಹೋರಾಟ' ಬರೆದಿದ್ದು 20 ನೇ ಅಧ್ಯಾಯದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಕ್ರಾಂತಿಕಾರಿ ಉಗ್ರರು ಎಂದು ಸಂಬೋಧಿಸಿದ್ದಾರೆ. ಅದರಲ್ಲಿ ಚಿತ್ತಗಾಂಗ್ ಚಳುವಳಿ ಮತ್ತು ಸ್ಯಾಂಡರ್ ಹತ್ಯೆಗೆ ಭಯೋತ್ಪಾದಕ ಕೃತ್ಯ ಎಂಬ ಹಣೆಪಟ್ಟಿ ನೀಡಲಾಗಿದೆ.  
 
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಸಂಬಂಧಿಗಳು ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳು ಗತಿಸಿದರೂ ಕ್ರಾಂತಿಕಾರಿಗಳನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ಖೇದ ವ್ಯಕ್ತಪಡಿಸಿದ್ದರು. ಜತೆಗೆ ಇದರಲ್ಲಿ ತಿದ್ದು ಪಡಿ ಮಾಡಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಲಾವಾ ಕಂಪೆನಿಯಿಂದ ಮೂರು ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಗೆ