Webdunia - Bharat's app for daily news and videos

Install App

ಲವ್ವರ್ ಭೇಟಿ ಮಾಡಲು ಲೈನ್‌ಮ್ಯಾನ್ ಏನ್ ಮಾಡ್ತಿದ್ದ ಗೊತ್ತ?

Webdunia
ಗುರುವಾರ, 12 ಮೇ 2022 (09:47 IST)
ಪಾಟ್ನಾ : ಪ್ರೇಮಿಗಳು ಪ್ರೀತಿಯಲ್ಲಿದ್ದಾಗ ಎಲ್ಲ ರೀತಿಯ ಹುಚ್ಚುತನದ ಕೆಲಸಗಳನ್ನು ಮಾಡುತ್ತಾರೆ.

ಅವರ ಕೆಲಸಗಳು ಬೇರೆಯವರಿಗೆ ತೊಂದರೆ ಕೊಡುತ್ತೆ ಎಂಬುದನ್ನು ಮರೆತುಬಿಡುತ್ತಾರೆ. ಅದೇ ರೀತಿ ಲೈನ್ಮ್ಯಾನ್ ಒಬ್ಬ ಕತ್ತಲೆಯ ನೆಪದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ಆಗಾಗ್ಗೆ ಕಡಿತಗೊಳಿಸುತ್ತಿದ್ದ ವಿಲಕ್ಷಣ ಘಟನೆಯೊಂದು ಬಿಹಾರದ ಪುರ್ನಿಯಾದಲ್ಲಿ ವರದಿಯಾದೆ.

ಪುರ್ನಿಯಾ ಜಿಲ್ಲೆಯ ಗಣೇಶ್ಪುರ ಗ್ರಾಮದ ಜನರು ಅಕ್ಕಪಕ್ಕದ ಹಳ್ಳಿಗಳಲ್ಲಿ ಯಾವುದೇ ರೀತಿಯ ಕರೆಂಟ್ ಸಮಸ್ಯೆಯಾಗುತ್ತಿಲ್ಲ. ಆದರೆ ನಮ್ಮ ಹಳ್ಳಿಯಲ್ಲಿ ಮಾತ್ರ ಯಾಕೆ ಈ ರೀತಿಯಾಗುತ್ತಿದೆ ಎಂದು ಯೋಚಿಸುತ್ತಿದ್ದರು. ತಿಂಗಳಲ್ಲಿ ಒಮ್ಮೆಯಾದರೂ ಈ ಸಮಸ್ಯೆ ಕಾಣಿಸಿಕೊಳ್ಳುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿ ಇದಕ್ಕೆ ನಿಖರವಾದ ಕಾರಣ ಹುಡುಕಲು ನಿರ್ಧರಿಸಿದರು. 

ಈ ಕುರಿತು ಪರಿಶೀಲಿಸಿದ ನಂತರ, ಎಲೆಕ್ಟ್ರಿಷಿಯನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿಯಾಗಲು ಹಳ್ಳಿಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಿರುವುದು ತಿಳಿದು ಗ್ರಾಮಸ್ಥರು ಆಘಾತಕ್ಕೊಳಗಾದರು. ಲೈನ್ಮ್ಯಾನ್ ನನ್ನು ಹಿಡಿಯಲು ನಿರ್ಧರಿಸಿದ ಗ್ರಾಮಸ್ಥರು ಒಂದು ಯೋಚನೆ ರೂಪಿಸಿದರು.

ಗ್ರಾಮಸ್ಥರು ಪ್ಲಾನ್ ಮಾಡಿದ ರೀತಿಯಲ್ಲಿಯೇ ಲೈನ್ಮ್ಯಾನ್ ಬಂದಿದ್ದು, ಎಲ್ಲರೂ ಕೋಪಗೊಂಡು ಅವನನ್ನು ಥಳಿಸಿದ್ದಾರೆ. ನಂತರ ಅವರು ಲೈನ್ಮ್ಯಾನ್  ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ಗ್ರಾಮದ ಮುಖ್ಯಸ್ಥ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತ ತನ್ನ ಪ್ರೇಯಸಿಯನ್ನು ಮದುವೆಯಾಗುವಂತೆ ತೀರ್ಮಾನ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments