Webdunia - Bharat's app for daily news and videos

Install App

ಆಟೋ ಚಾಲಕನ ಕೆನ್ನೆಗೆ ಬಾರಿಸಿದ ಮಾಜಿ ಸಿಎಂ ಪುತ್ರ

Webdunia
ಶುಕ್ರವಾರ, 9 ಅಕ್ಟೋಬರ್ 2015 (10:51 IST)
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಕರುಣಾನಿಧಿ ಪುತ್ರ ಸ್ಟಾಲಿನ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ ಎಂಬ ಕಾರಣಕ್ಕೆ ಆಟೋ ಚಾಲಕನೊಬ್ಬನಿಗೆ ಅವರು ಕಪಾಳಮೋಕ್ಷ ಮಾಡಿದ್ದು ಇದನ್ನು ಸಾಬೀತು ಪಡಿಸುವ ವೀಡಿಯೋವೀಗ ವೈರಲ್ ಆಗಿ ಹರಿದಾಡುತ್ತಿದೆ. 

ಗುಡಲೂರಿನಲ್ಲಿ ಸಾರ್ವಜನಿಕರ ಜತೆ ಬೆರೆತು ಅಹವಾಲುಗಳನ್ನು ಸ್ವೀಕರಿಸುತ್ತಿದ್ದ ಸ್ಟಾಲಿನ್ ಹತ್ತಿರಕ್ಕೆ ಬಂದ ಆಟೋ ಚಾಲಕನೊರ್ವ ಅವರ ಜತೆ ತನ್ನ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ತಳ್ಳಾಟದಿಂದಾಗಿ ಆತ ಸ್ಟಾಲಿನ್ ಮೇಲೆ ಬೀಳುವಂತಾಗಿದೆ. ಇದರಿಂದ ಕೋಪಗೊಂಡ ಸ್ಟಾಲಿನ್ ಆತನ ಕಪಾಳಕ್ಕೆ ಬಾರಿಸಿದ್ದಾರೆ. ಈ ಘಟನೆಯ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
 
ಸ್ಟಾಲಿನ್ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿರೋಧ ಪಕ್ಷಗಳು ಇದನ್ನು ತೀವ್ರವಾಗಿ ಖಂಡಿಸಿವೆ.
 
ಆದರೆ ನಾಯಕನ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಡಿಎಂಕೆ ಕಾರ್ಯಕರ್ತರು ಆಟೋ ಚಾಲಕ ತನ್ನ ಮೇಲೆ ಬೀಳುತ್ತಿರುವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆತನನ್ನು ದೂಡಿದ್ದಾರಷ್ಟೇ ಎಂದಿದ್ದಾರೆ.
 
ಸ್ಟಾಲಿನ್ ಈ ರೀತಿಯ ವಿವಾದಕ್ಕೀಡಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚೆನ್ನೈ ಮೆಟ್ರೋ ರೈಲಿನಲ್ಲಿ ಫೋಟೋ ತೆಗೆಯಲು  ಪ್ರಯತ್ನಿಸಿದ್ದ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿ ಅವರು ವಿವಾದಕ್ಕೀಡಾಗಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments