Webdunia - Bharat's app for daily news and videos

Install App

ತಮಿಳುನಾಡು ಸರಕಾರದ ಬಿಕ್ಕಟ್ಟಿಗೆ ಮೋದಿ ಸರಕಾರವೇ ಕಾರಣ: ಸ್ಟಾಲಿನ್

Webdunia
ಬುಧವಾರ, 30 ಆಗಸ್ಟ್ 2017 (16:26 IST)
ಎಐಎಡಿಎಂಕೆ ನೇತೃತ್ವದ ತಮಿಳುನಾಡು ಸರಕಾರದ ಬಿಕ್ಕಟ್ಟಿಗೆ ಪ್ರಧಾನಿ ಮೋದಿ ನೇತೃತ್ವದ ಸರಕಾರವೇ ಕಾರಣ ಎಂದು  ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
ಎಐಎಡಿಎಂಕೆ ಬಣಗಳ ವಿಲೀನಗೊಂಡ ಒಂದು ವಾರದ ನಂತರ ಸ್ಟಾಲಿನ್ ಹೇಳಿಕೆ ನೀಡಿ, ಗುರುವಾರದಂದು 11 ಗಂಟೆಗೆ ನಮ್ಮನ್ನು ಭೇಟಿ ಮಾಡಲು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಒಪ್ಪಿಕೊಂಡಿದ್ದಾರೆ. ಮೈತ್ರಿಪಕ್ಷಗಳೊಂದಿಗೆ ಅವರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 
 
"ರಾಷ್ಟ್ರಪತಿಯವರನ್ನು ಭೇಟಿಯಾದ ಬಳಿಕವೂ ಕೇಂದ್ರ ಸರಕಾರ ತಮಿಳುನಾಡು ಸರಕಾರದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಕಾನೂನಿನ ಮೊರೆಹೋಗುತ್ತೇವೆ ಎಂದು ಗುಡುಗಿದ್ದಾರೆ.
 
ಎಐಎಡಿಎಂಕೆ ವಿಲೀನದ ನಂತರ 19 ಮಂದಿ ಶಾಸಕರು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ (ಇಪಿಎಸ್) ಸರಕಾರದಿಂದ ತಮ್ಮ ಬೆಂಬಲವನ್ನು ಹಿಂಪಡೆದಿದ್ದರಿಂದ ಸರಕಾರ ಬಹುಮತದ ಕೊರತೆ ಎದುರಿಸುತ್ತಿದೆ.
 
ಬಂಡಾಯ ಶಾಸಕರು ದಿನಕರನ್ ಅವರ ನಿವಾಸದಲ್ಲಿ ಭೇಟಿಯಾಗಿ ಪಳನಿಸ್ವಾಮಿ ಬಣದ ಭಾಗವಾಗಿದ್ದ ಶಾಸಕರು ಕೂಡಾ, ದಿನಕರನ್‌ಗೆ ಬಹಿರಂಗವಾಗಿ ಬೆಂಬಲವನ್ನು ಘೋಷಿಸಬಹುದು ಎನ್ನುವ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
 
ಏತನ್ಮಧ್ಯೆ, ಓ ಪನ್ನೀರ್‌ಸೆಲ್ವಂ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಹಣಕಾಸು, ವಸತಿ, ಗ್ರಾಮೀಣ ವಸತಿ, ವಸತಿ ಅಭಿವೃದ್ಧಿ, ಸ್ಲಂ ಕ್ಲಿಯರೆನ್ಸ್ ಬೋರ್ಡ್, ಟೌನ್ ಯೋಜನೆ, ನಗರಾಭಿವೃದ್ಧಿ, ಚೆನ್ನೈ ಮೆಟ್ರೋಪಾಲಿಟನ್ ಡೆವಲಪ್‌‍ಮೆಂಟ್ ಅಥಾರಿಟಿ ಮತ್ತು ವಸತಿ ನಿಯಂತ್ರಣ ಖಾತೆಗಳನ್ನು ನೀಡಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ನಾವು ಹಿಂದೂಗಳಂತಲ್ಲ, ಕಾಶ್ಮೀರ ಯಾವತ್ತಿದ್ರೂ ನಮ್ಮದೇ, ಶತ್ರುಗಳು ಏನೂ ಮಾಡಕ್ಕಾಗಲ್ಲ: ಪಾಕ್ ಸೇನಾ ಮುಖ್ಯಸ್ಥ

West Bengal: ಪಶ್ಚಿಮ ಬಂಗಾಲದಲ್ಲಿ ವಕ್ಫ್ ಗಲಾಟೆಯಲ್ಲಿ ಸುಟ್ಟು ಕರಕಲಾದ ಸೀರೆಅಂಗಡಿ ವಿಡಿಯೋ ನೋಡಿದ್ರೆ ಕರುಳು ಚುರಕ್ ಅನ್ನುತ್ತೆ

Arecanut price today: ಅಡಿಕೆ ಬೆಳೆಗಾರರಿಗೆ ನೆಮ್ಮದಿ ಕೊಡುವ ಸುದ್ದಿ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Gold Price today: ಲಕ್ಷದ ಸನಿಹದಲ್ಲಿ ಚಿನ್ನದ ಬೆಲೆ, ಇಂದಿನ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ

Kukke Subramanya: ಕರ್ನಾಟಕದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ: ಆದಾಯವೆಷ್ಟು ನೋಡಿ

ಮುಂದಿನ ಸುದ್ದಿ
Show comments