ಜೈ ಶ್ರೀರಾಮ್ ಛೀ.. ರಾಮ ನಮ್ಮ ಶತ್ರು ಎಂದು ಡಿಎಂಕೆ ನಾಯಕ ಎ ರಾಜ ವಿವಾದ

Krishnaveni K
ಬುಧವಾರ, 6 ಮಾರ್ಚ್ 2024 (09:01 IST)
ಚೆನ್ನೈ: ಶ್ರೀರಾಮನ ಬಗ್ಗೆ ಇಂಡಿಯಾ ಒಕ್ಕೂಟದ ನಾಯಕರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇದ್ದಾರೆ. ಇದೀಗ ಡಿಎಂಕೆ ನಾಯಕ ಎ ರಾಜ ಪ್ರಭು ಶ್ರೀರಾಮನ ಬಗ್ಗೆ ಅವಹೇಳನಕಾರೀ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ವಿಪಕ್ಷ ಇಂಡಿಯಾ ಒಕ್ಕೂಟ ಪಕ್ಷಗಳಲ್ಲಿ ಒಂದಾದ ಡಿಎಂಕೆ ನಾಯಕ ಎ ರಾಜ ಶ್ರೀರಾಮ ಛೀ.. ಈಡಿಯಟ್ ಎಂದಿದ್ದಲ್ಲದೆ ನಾನು ಶ್ರೀರಾಮನ ಶತ್ರು ಎಂದಿದ್ದಾರೆ. ರಾಮ ಮತ್ತು ರಾಮಾಯಣದಲ್ಲಿ ನನಗೆ ನಂಬಿಕೆಯೇ ಇಲ್ಲ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಾಲಿಗೆ ಹರಿಯಬಿಟ್ಟಿದ್ದಾರೆ. ಅವರ ಈ ಹೇಳಿಕೆಗಳನ್ನು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇದಕ್ಕೆ ಇಂಡಿಯಾ ಬ್ಲಾಕ್ ನ ನಾಯಕರು ಉತ್ತರಿಸಬೇಕು ಎಂದಿದೆ.

ತಮಿಳುನಾಡಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎ ರಾಜ ‘ನಾವು ಭಾರತ ಮಾತೆ, ಜೈ ಶ್ರೀರಾಮ ದೇವರು ಎಂದರೆ ಒಪ್ಪಲ್ಲ. ತಮಿಳುನಾಡು ಜನ ಇದನ್ನು ಒಪ್ಪಲ್ಲ. ರಾಮ ನಮ್ಮ ಶತ್ರು ಎನ್ನಿ. ರಾಮಾಯಣದಲ್ಲಿ ನಂಬಿಕೆಯಿಲ್ಲ ಎನ್ನಿ. ಶ್ರೀರಾಮ ನಮ್ಮ ದೇವರು ಎನ್ನುವವರು ಅಪರಾಧಿಗಳು. ಹಾಗೆ ಯಾರಾದರೂ ಹೇಳಿದರೆ ನಿಮ್ಮ ಜೈ ಶ್ರೀರಾಮ ಛೀ.. ಹಾಗೆ ಹೇಳುವವರು ಈಡಿಯಟ್ಸ್’ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಅಷ್ಟೇ ಅಲ್ಲ, ಭಾರತ ದೇಶವಲ್ಲ. ಬೇರೆ ಬೇರೆ ದೇಶಗಳನ್ನು ಹೊಂದಿರುವ ಉಪಖಂಡ ಎಂದೂ ಹೇಳಿಕೊಂಡಿದ್ದಾರೆ. ತಮಿಳು ಭಾಷೆ ಮಾತನಾಡುವ ತಮಿಳುನಾಡು ಒಂದು ರಾಷ್ಟ್ರ, ಮಲಯಾಳಂ ಮಾತನಾಡುವ ಕೇರಳ ಇನ್ನೊಂದು ದೇಶ, ಒಡಿಶ್ಶಿ ಮಾತನಾಡುವ ಒರಿಸ್ಸಾ ಇನ್ನೊಂದು ರಾಷ್ಟ್ರ. ಹೀಗೆ ಬೇರೆ ಬೇರೆ ಭಾಷೆ ಮಾತನಾಡುವ ಹಲವು ರಾಷ್ಟ್ರಗಳು ಸೇರಿದ ಉಪಖಂಡ ಭಾರತ ಎಂದೆಲ್ಲಾ ಬೇಕಾಬಿಟ್ಟಿ ಮಾತನಾಡಿದ್ದಾರೆ.

ಅವರ ಈ ವಿಡಿಯೋಗಳನ್ನು ಹಂಚಿಕೊಂಡ ಬಿಜೆಪಿ ಇದಕ್ಕೆ ಇಂಡಿಯಾ ಒಕ್ಕೂಟದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಏನಂತಾರೆ? ಇನ್ನೊಂದು ಧರ್ಮವನ್ನು ಅವಹೇಳನ ಮಾಡುವುದು ಸಮಾನತೆಯೇ?  ಹಿಂದೂ ದೇವರನ್ನು ಪ್ರಶ್ನಿಸುವುದು, ಖಂಡಿಸುವುದೇ ಇಂಡಿಯಾ ಒಕ್ಕೂಟದ ನಾಯಕರ ಖಯಾಲಿಯಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ: ಸಂತ್ರಸ್ತರ ಭೇಟಿಗೆ ವ್ಯವಸ್ಥೆ ಮಾಡಿದ ನಟ ವಿಜಯ್

ಯಮುನಾ ನೀರು ಶುದ್ಧವಾಗಿದೆಯೆಂದ ರೇಖಾ ಗುಪ್ತಾ ಕುಡಿದು ತೋರಿಸಲಿ: ಆ್ಯಪ್ ಸವಾಲು

7 ವರ್ಷದ ಬಾಲಕಿಯನ್ನು ಕೊಚ್ಚಿ ಕೊಂದ ಮಲತಂದೆ, ಕಾರಣ ಕೇಳಿದ್ರೆ ಶಾಕ್‌

ಉ.ಪ್ರದೇಶ: 5 ದೇವಸ್ಥಾನದ ಗೋಡೆಯಲ್ಲಿ ಐ ಲವ್ ಮುಹಮ್ಮದ್ ಬರಹ, ಉದ್ವಿಗ್ನ ವಾತಾವರಣ ಸೃಷ್ಟಿ

Kurnool Bus Accident: ಡಿಕ್ಕಿ ಹೊಡೆದ ಬೈಕ್ ಸವಾರರ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments